
ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್ ಗೊಲಾನ್
ರಾಷ್ಟ್ರ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಮನೆ ಇಲ್ಲಿ ಕಾಣುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಇದೀಗ ಸ್ಮಾರಕವಾಗಿದೆ. ಪ್ರವಾಸಿ ತಾಣವಾಗಿರುವ ಕವಿಮನೆಯ ಜೊತೆಯಲ್ಲಿ ಕೃಷಿ ಪರಿಕರಗಳ ವಸ್ತು ಸಂಗ್ರಹಾಲಯ, ಕವಿಶೈಲ, ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಕಾಣಸಿಗುತ್ತದೆ. ಮಲೆನಾಡಿನ ತಂಪು ವಾತಾವರಣದಲ್ಲಿ ಕುಳಿತು ಹಕ್ಕಿಳ ಗುಂಪು ಹಾರುವುದನ್ನು ಕಂಡು ದೇವರು ರುಜು ಮಾಡಿದನು ಎಂದು, ಪಕ್ಕದ ಕಾನೂರು ಎಂಬ ಹಳ್ಳಿಯ ಕಥನವನ್ನು ಕಾನೂರ ಹೆಗ್ಗಡತಿ ಎಂಬ ಕಾದಂಬರಿಯಾಗಿ ಹೊರತಂದರು. ಕುವೆಂಪುವರ ಬರವಣಿಗೆಯ ಪರಿಸರವನ್ನು ಇಲ್ಲಿಗೆ ಹೋದರೆ ಇಂದು ನಾವು ಅನುಭವಿಸಬಹುದು.
ವಿ ಎಂ ಲಿಂಗಯ್ಯ ಕಾಲೇಜ್ ಆಫ್ ಎಜುಕೇಶನ್ ಸಂಸ್ಥೆಯ ವಿದ್ಯಾರ್ಥಿ ಅನ್ವರ್‌ಸಾಬ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ…
