Back To Top

 ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ. ಆರ್ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಯೂಸಫ್ ಹೆಚ್.ಬಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು, ಶ್ರೀಮತಿ ಅಶ್ವಿನಿ ಎಸ್ ಅಂಗಡಿ ಕವಿಗೋಷ್ಠಿಯ ಅಧ್ಯಕ್ಷತೆ ಮತ್ತು ಡಾ. ಬಿ. ಎನ್ ಸುರೇಶ್ ಬಾಬು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಕವಿಗಳು ಸ್ವರಚಿತ ಕವನವನ್ನು ವಾಚನ ಮಾಡಿದರು. ಕರ್ನಾಟಕ ಸುವರ್ಣ ಮಹೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತರಷ್ಟು ಸಾಧಕರಿಗೆ ಖಿದ್ಮಾ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಜಯ ಕಾಲೇಜು ಉಪ ಪ್ರಾಂಶುಪಾಲರಾದ ಪ್ರೊ. ಎಲ್.ಕೆ. ಶ್ರೀವತ್ಸ, ಖಿದ್ಮಾ ಅಧ್ಯಕ್ಷ ಹಾಶಿಂ ಬನ್ನೂರು, ಶ್ರೀಮತಿ ಕಮಲಾಕ್ಷಿ ಸುರೇಶ್ ಕೌಜಲಗಿ, ಶ್ರೀ ಹುಮಾಯೂನ್, ಡಾ. ಆರ್ ಎಸ್ ರವೀಂದ್ರ, ಶ್ರೀ ಕೆ.ಶ್ರೀಧರ್ (ಕೆ.ಸಿರಿ), ಡಾ.ಎಮ್.ಎಮ್.ಪೀರಜಾದೆ, ಶ್ರೀ ಉಮೇಶ್ ಸಿ. ಎನ್, ಡಾ.ಗಣೇಶ್ ಗಂಗೊಳ್ಳಿ, ಶ್ರೀ ವಿನಯ್ ಖಾನ್, ಡಾ ಜುಬೇದಾ ಎಂ ಬದಾಮಿ, ಡಾ. ಜ್ಯೋತಿ ಶ್ರೀನಿವಾಸ್, ಶ್ರೀ ಸಿನಾನ್ ಇದ್ದಬೆಟ್ಟು, ಶ್ರೀಮತಿ ರಾಧಾಮಣಿ ಎಂ ಕೋಲಾರ, ಉದಯ್ ಕಿರಣ್ ಬಿ, ಕಿರಣ್ ಕೆ. ಸಂತೋಷ್ ಕುಮಾರ್, ಪೂಜಾ ಸಿ.ಐ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಸ್ವಾಗತಿಸಿ, ಶ್ರೀಮತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ನಿರೂಪಿಸಿದರು. ಕಾರ್ಯಕ್ರಮದ ಆಯೋಜಕ ಹಾಗೂ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ವಂದಿಸಿದರು.

Prev Post

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

Next Post

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

post-bars

Leave a Comment

Related post