Back To Top

 ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ,
ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ.
ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು,
ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು.

ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು,
ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು ಪರಮಾತ್ಮನೇ ಅವತರಿಸಿದಂತಾಯಿತು.
ಕಂಠದ ತುಂಬಾ ಸಾರಯಿಳಿಸಿ ಸಾಧಕರಾದೆವು ನಾವು.
ತೀರ್ಥವ ಸೇವಿಸಿ ದರ್ಶನಕ್ಕೆ ಹೋಗುವೆವು ನಾವು.

ಎಲ್ಲವನ್ನು ತೊರೆದು ತ್ಯಾಗಮಯಿಗಳಾದೆವು ನಾವು,
ಈ ಅಮೃತದ ಸುಧೆಯ ಮಾತ್ರ ತ್ಯಜಿಸಲಾರೆವು ನಾವು.
ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ,
ಎರಡೇ ಗುಟುಕಿಗೆ ಕಷ್ಟ ನಿವಾರಿಸುವ ಮೇಧಾವಿಗಳಾಗುತ್ತವೆ.

ದೇವರುಗಳ ಹೆಸರಲಿ ಜಪವ ಮಾಡುವರು ಸನ್ಯಾಸಿಗಳು,
ದೇವಿಯಂತವಳ ಹೆಸರ ಜಪಿಸುವರು ಕುಡಿದ ಮುನಿಗಳು.
ಇರುವುದೆಲ್ಲವ ಬಿಟ್ಟು ಎಲ್ಲೋ ಹೋಗಿ ಬದುಕುವವರು ಮೇಲೋ?
ಬಿಟ್ಟು ಹೋದವಳ ನೆನಪಿಗೆ ಬಿಡದೆ ಕುಡಿದು-ಬದುಕುವವರು ಮೇಲೋ?

ಭಿಕ್ಷೆಯಬೇಡಿ ಪರರ ಧರ್ಮದಲ್ಲಿ ಬದುಕುವವರು ಕೀಳೋ?
ದುಡಿದ ಹಣವ ಸುರಿದು ಸರ್ಕಾರದ ದಾನಿಗಳಾಗುವವರು ಕೀಳೋ?
ಮನಸ್ಸಿನ ಆಸೆಗಳನು ಸೆರೆ ಹಿಡಿದು ಬಾಳುವವನುತ್ತಮನೋ?
ನೊಂದು-ಬೆಂದು ಆಸೆಯ ಗಂಟನ್ನೇ ಎಸೆದವನು ಉತ್ತಮನೋ?

ವೇಶವ ತೊಟ್ಟು ಸುಲಿಗೆ ಮಾಡುವ ಬದುಕು ಸಾಕು,
ಕುಡಿದು ಕನಸಿನಲಿ ಕಳೆದುಹೋಗೊ ಮಂದಿ ನಮಗೆ ಬೇಕು.
ಒಂದೇ ಲೋಕಕ್ಕೆ ನೂರು ರೂಪವ ಹುಡುಕುವರು ಬೆಪ್ಪುಗಳು,
ಒಂದೇ ಲೋಟಕ್ಕೆ ನೂರು ಲೋಕವನ್ನು ಕಾಣುವರು ಕುಡುಕ-ಸನ್ಯಾಸಿಗಳು.

ಆ ನಿಮ್ಮ ದೇವರುಗಳಿಗೂ ನಾವೇ ಪ್ರಿಯಕರರು,
ಕುಂಟು ನೆಪವ ಹೇಳಿ ನಮ್ಮನ್ನೇ ಮೊದಲು ಕರೆಯುವರು.
ಪರಮಾತ್ಮನನ್ನು ತಲುಪಲು ಮರದಡಿ ಧ್ಯಾನಿಸಬೇಕಿಲ್ಲ,
ಪರಮಾತ್ಮನನ್ನೆ ಸ್ವೀಕರಿಸಿ ಗಾಡಿ ಚಲಿಸಿದರೆ ಸಾಕಲ್ಲ..

ಚಿತ್ತ ಸಾಗರ್
ಪ್ರಥಮ ಪಿಯುಸಿ
ಯೂನಿವರ್ಸಲ್ ಪಿ ಯು ಕಾಲೇಜು, ಬೆಂಗಳೂರು 

Prev Post

ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

Next Post

ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

post-bars

One thought on “ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

Future Yograj Bhat.
, very sensible thought

Reply

Leave a Comment

Related post