
Govinda Dasa College: ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮ
ಸುರತ್ಕಲ್: ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮದಲ್ಲಿ, ತೃತೀಯ ಬಿ.ಕಾಂ ವಿದ್ಯಾರ್ಥಿ ಶಾರೊನ್ ಎಲ್ಸನ್ ಡಿ’ಸೋಜಾ ರವರು ಚೇತನ್ ಭಗತ್ ಬರೆದ ಒನ್ ನೈಟ್ @ ದಿ ಕಾಲ್ ಸೆಂಟರ್ ಎಂಬ ಪುಸ್ತಕವನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ. ಪಿ ಇವರು ಶಾರೊನ್ ಎಲ್ಸನ್ ಡಿ’ಸೋಜಾ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉಪಪ್ರಾಂಶುಪಾಲ ಹಾಗು ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ. ನೀಲಪ್ಪ.ವಿ., ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ. ಪಿ, ಪ್ರಾಧ್ಯಾಪಕರುಗಳಾದ ಡಾ. ಸುಧಾ ಯು, ಡಾ. ಭಾಗ್ಯ ಲಕ್ಷ್ಮಿ. ಡಾ. ಪ್ರಶಾಂತ ಎಂ. ಡಿ, ಧನ್ಯಕುಮಾರ, ಅಪೇಕ್ಷಾ ಭಂಡಾರಿ ಹಾಗು ಗ್ರಂಥಪಾಲಕಿ ಡಾ. ಸುಜಾತಾ. ಬಿ ಉಪಸ್ಥಿತರಿದ್ದರು. ತೃತೀಯ ಬಿ. ಕಾಂ ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿ ವಂದಿಸಿದರು.