ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ
ನನ್ನ ಕಾಲೇಜಿನ ದಿನಗಳೇ ಒಂದು ರೀತಿಯ ಬೋರಿಂಗ್ ಡೇಸ್. ಪಿಯುಸಿ ಮಾಡಿದ್ದು ಕರೆಸ್ಪಾಂಡಿಂಗ್ ಅಲ್ಲಿ. ಆದ್ದರಿಂದ, ಡಿಗ್ರಿಯನ್ನು ಖುಷಿ ಖುಷಿಯಿಂದ ಮುಗಿಸುವ ಆಸೆ. ಇತ್ತು ನಮಗೆ ಕಾಲೇಜು ಇದ್ದ ಸಮಯ 12:30 ರಿಂದ 4:30ರ ತನಕ ಆ ಸಮಯದಲ್ಲಿ ಸಿನಿಮಾ ಎಲ್ಲಿ ನೋಡಲು ಹೋಗೋಣ. ಮಧ್ಯಾಹ್ನ ಬೇರೆ ಕ್ಲಾಸ್ ನಡೆಯುತ್ತಿದ್ದರಿಂದ ನಿದ್ದೆ ಬರುತ್ತಾ ಇತ್ತು.
ಆದರೂ ಕ್ಲಾಸ್ ಕೇಳಲೇಬೇಕು ಅಲ್ವಾ ಹಾಗೆ ಪ್ರತಿದಿನ ಕಳೆಯುತ್ತಲೇ ಇರುತ್ತಿತ್ತು. ನಾನು ಕ್ಲಾಸ್ ಬಂಕ್ ಮಾಡಿ ಫಿಲಂ ನೋಡಿದ್ದು ಫ್ರೆಂಡ್ಸ್‌ಗಿಂತಲೂ ಹೆಚ್ಚು ನನ್ನ ಅತ್ತೆಯ ಜೊತೆಯಲ್ಲಿ. ನನ್ನ ಫ್ರೆಂಡ್ಸ್ ಜೊತೆ ಫಿಲಂ ನೋಡಿರೋದು ತೀರಾ ಕಡಿಮೆ. ನಾನು ನನ್ನ ಅತ್ತೆ ಒಳ್ಳೆ ಸ್ನೇಹಿತರಂತೆ. ಸಿನಿಮಾ ರಿಲೀಸ್ ಆದರೆ ಸಾಕು ಅತ್ತೆಯಲ್ಲಿ ಸಿನಿಮಾಗೆ ಕರೆದುಕೊಂಡು ಹೋಗಿ ಎಂದು ಹೇಳಿದ ಕೂಡಲೇ ಹೊರಡುತ್ತಿದ್ದರು.
ನಾವಿಬ್ಬರು ಜೊತೆಗೂಡಿ ಅನೇಕ ಸಿನಿಮಾ ನೋಡಿದ್ದೇವೆ. ಆ ಒಂದು ದಿನ ನಾನು ಮತ್ತೆ ಅತ್ತೆ ಬಹಳ ಖುಷಿಯಿಂದ ಸಪ್ತ ಸಾಗರದಾಚೆಯಲ್ಲೂ ಫಿಲಂ ಅನ್ನು ನೋಡಲು ಹೊರಟಿದ್ದೆವು. ಆದರೆ ನಮ್ಮ ದುರಾದೃಷ್ಟ ಅಂದು ಆ ಸಿನಿಮಾವನ್ನು ಆ ಥಿಯೇಟರ್‌ನಿಂದ ತೆಗೆದಿದ್ದರು. ಅದೇ ಥಿಯೇಟರ್‌ನಲ್ಲಿ ಅಂದು ಪ್ರೀತಂ ಗುಬ್ಬಿ ನಿರ್ದೇಶನದ ಶ್ರೀವಾರಿ ಟಾಕೀಸ್ ಅವರ ನಿರ್ಮಾಣದ 2023ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಸಿನಿಮಾ ಬಾನ ದಾರಿಯಲ್ಲಿ ಹಾಕಿದ್ದರು.
ಚಿತ್ರದಲ್ಲಿ ಗಣೇಶ್, ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹಾಗೆ ಈ ಚಿತ್ರವು ಗಣೇಶ್ ಮತ್ತು ಪ್ರೀತಂ ಗುಬ್ಬಿಯವರ ನಾಲ್ಕನೇ ಬಾರಿ ಜೊತೆಯಾಗಿದ್ದ ಸಿನಿಮಾ. ಅರ್ಜುನ್ ಜನ್ಯ ಅವರ ಸಂಗೀತ ಅದ್ಭುತವಾಗಿ ಮೂಡಿಬಂದಿತ್ತು. ಪ್ರೀತಿ ಎನ್ನುವುದು ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ ತಂದೆ ಮತ್ತು ಮಗಳು ಹಾಗೂ ಸಹೋದರರ ನಡುವಿನ ಸಂಬಂಧಗಳು ಕೂಡ ಹೌದು ಎಂಬುದನ್ನು ನಾವು ಬಾನ ದಾರಿಯಲ್ಲಿ ಸಿನಿಮಾದಲ್ಲಿ ನೋಡಬವುದು.
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಈ ಹಾಡು ಈ ಸಿನಿಮಾದಲ್ಲಿ ಅಪ್ಪಮಗಳಿಗೆ ತುಂಬಾ ಅಚ್ಚು ಮೆಚ್ಚು. ಕಾಡಿನಲ್ಲಿ ಆಡಿಕೊಂಡಿರುವ ಪ್ರಾಣಿಗಳನ್ನು ನೋಡಬೇಕೆಂಬ ತನ್ನ ಆಸೆಯನ್ನು ಅಪ್ಪನಿಗೆ ಹೇಳುತ್ತಾಳೆ, ಹಾಗೆ ನಿಧಾನವಾಗಿ ಲೀಲಾ ನಿದ್ದೆಗೆ ಹೋಗುತ್ತಾಳೆ. ಬಾನದಾರಿಯಲ್ಲಿ ಹಾಡಿನ ಜೊತೆಗೆ ಸಿನಿಮಾ ಶುರುವಾಗುತ್ತದೆ. ಇದೆಲ್ಲ ಹೇಳಿದ ಮೇಲೆ ಇದು ಅಪ್ಪ-ಮಗಳ ಸೆಂಟಿಮೆಂಟ್ ಸ್ಟೋರಿ ಎಂಬುದು ತಿಳಿಯುತ್ತದೆ. ಜೊತೆಗೆ ಒಂದು ಲವ್ ಸ್ಟೋರಿಯನ್ನು ಸೇರಿಸಿ ಬಾನ ದಾರಿಯಲ್ಲಿ ಸಿನಿಮಾ ಮೂಡಿಬಂದಿದೆ. ಲೀಲಾ ದೊಡ್ಡವಳಾದ ಮೇಲೆ ಸ್ವಿಮಿಂಗ್ ಕೋಚ್ ಆಗುತ್ತಾಳೆ, ಸಿದ್ ಕ್ರಿಕೆಟರ್ ಆಗುತ್ತಾನೆ.
ಇವನಿಗೆ ಮೊದಲ ನೋಟದಲ್ಲಿ ಅವಳ ಮೇಲೆ ಪ್ರೀತಿ ಆಗುತ್ತದೆ. ಅಪ್ಪನೇ ಸರ್ವಸ್ವ ಅಪ್ಪ ಒಪ್ಪಿದರೆ ಮಾತ್ರ ಮದುವೆ ಎಂಬ ಹುಡುಗಿ ಲೀಲಾ ಹಿಂದೆ ಬೀಳುವ ಸಿದ್ ಕೊನೆಗೂ ಅವಳಿಂದ ತಮ್ಮ ಪ್ರೀತಿಗೆ ಅನುಮತಿ ಪಡೆದುಕೊಳ್ಳುತ್ತಾನೆ. ಹಾಗೆ ಇಬ್ಬರ ಮದುವೆ ಹಿಂದಿನ ದಿನ ಅವಳು ಮರಣ ಹೊಂದುತ್ತಾಳೆ. ಸಿನಿಮಾ ಬಹಳ ವಿಭಿನ್ನವಾಗಿದೆ. ಕೀನ್ಯಾವನ್ನು ಚೆನ್ನಾಗಿ ತೋರಿಸಲಾಗಿದೆ. ನಾವೇ ಕೀನ್ಯಾಗೆ ಹೋಗಿ ಬಂದಂತೆ ಆಯ್ತು.
ಪ್ರಾಣಿಗಳನ್ನು ಕೀನ್ಯಾದಲ್ಲಿ ಬೋನಿನೊಳಗೆ ಇಡುವುದಿಲ್ಲ, ಮುಕ್ತವಾಗಿ ಬಿಡುತ್ತಾರೆ ಎಂಬ ಲೀಲಾಳ ಕನಸು. ಬಂಡಿಪುರ, ನಾಗರಹೊಳೆಯ ಸಂರಕ್ಷಿತಾರಣ್ಯಗಳಲ್ಲಿಯೂ ಪ್ರಾಣಿಗಳು ಬೋನಿನಿಂದ ಹೊರಗೆ ಬದುಕುತ್ತವೆಯಲ್ಲ ಎಂಬ ಪ್ರಶ್ನೆ ಚಿತ್ರ ನೋಡುತ್ತಿದ್ದ ನಮ್ಮ ಮನಸಿನಲ್ಲಿ ಮೂಡುತ್ತದೆ. ಒಟ್ಟಿನಲ್ಲಿ ಅಪ್ಪ ಮಗಳ ಪ್ರೀತಿಯ ದೃಶ್ಯಗಳು ಹೃದಯಕ್ಕೆ ಬಹಳ ಹತ್ತಿರವಾಗುತ್ತಿದೆ. ರಂಗಾಯಣ ರಘು ಅವರ ನಟನೆ ಬಗ್ಗೆ ಹೇಳುವುದೇ ಬೇಡ. ಆದರೆ ಕಥೆಯ ಅರ್ಧಭಾಗ ಸಿದ್ದು ಮತ್ತು ಲೀಲಾಳ ಅಪ್ಪ ವಾಸುವಿನ ನಡುವೆ ನಡೆಯುತ್ತದೆ. ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ರಂಗಾಯಣ ರಘು, ಲೀಲಾ ಅಪ್ಪನಾಗಿ ಗಂಭೀರ ಪಾತ್ರವನ್ನು ಮಾಡಿದ್ದಾರೆ. ಚಿತ್ರದ ಮೊದಲಾರ್ಧ ಲೀಲಾ–ಸಿದ್ದು ಪ್ರೀತಿ, ಅಲ್ಲಲ್ಲಿ ನಗಿಸುವ ಮಾತುಗಳೊಂದಿಗೆ ನಿಧಾನಕ್ಕೆ ಎಳೆದುಕೊಂಡು ಹೋಗುತ್ತದೆ.
ರಂಜಿತ ಹೆಚ್. ಕೆ
ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು