Back To Top

 ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

ಡು ಮುಟ್ಟದ ಸೊಪ್ಪಿಲ್ಲ ಜಾನಪದ ಹೇಳದ ವಿಷಯಗಳಿಲ್ಲ. ಜನಪದರು ತಮ್ಮ ದಿನ ನಿತ್ಯದ ಕೆಲಸಗಳನ್ನು ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು.

ಆಧುನಿಕತೆ ತಾಂತ್ರಿಕ ಯುಗದಲ್ಲಿ ಈಗಿನ ಯುವ ಸಮೂಹ ಟಿವಿ ಮೊಬೈಲ್ ಅಂತರ್ಜಾಲದಂತಹ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗಿದ್ದಾರೆ. ಬಾಲ್ಯದಲ್ಲಿ ಕಂಡ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ ಈ ರೀತಿಯ ವಿವಿಧ ಪ್ರಕಾರಗಳಲ್ಲಿ ನನಗಿಷ್ಟವಾದದ್ದು ಕಂಸಾಳೆ ನೃತ್ಯ.

ಇದು ಮೈಸೂರು, ನಂಜನಗೂಡು, ಮಂಡ್ಯ, ಕೊಳ್ಳೇಗಾಲ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಪ್ರಚಲಿತವಾಗಿರುವ ನೃತ್ಯ ಪ್ರಕಾರವಾಗಿದೆ. ಹಾಗೆಯೇ ಈ ಪ್ರದೇಶಗಳಲ್ಲಿ ಕಲೆ ಎಂದಿಗೂ ಜೀವಂತವಾಗಿದೆ.

ಕಂಸಾಳೆಯ ವಿಶೇಷತೆ: 
ಮಹದೇಶ್ವರನ ಭಕ್ತ ವೃಂದದವರಿಂದ ಪ್ರಾರಂಭಿಸಲ್ಪಟ್ಟ ಜಾನಪದ ಕಲೆ. ದೇವರ ಗುಡ್ಡರು ಬಳಸುವ ವಿಶೇಷ ವಾದ್ಯ ವಾಹನ ಸಂಚಾರಗಳು ಕಡಿಮೆ ಇದ್ದ ಆ ದಿನಗಳಲ್ಲಿ ಜನರು ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಗುಂಪು ಗುಂಪಾಗಿ ಸಾಗುತ್ತಿದ್ದರು.

ದಟ್ಟ ಅರಣ್ಯದಲ್ಲಿ ಹೀಗೆ ಸಾಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಕಂಚಿನಿಂದ ಮಾಡಿದ ಜೋಡಿ ಕಂಸಾಳೆಯನ್ನು ಬಳಸುತ್ತಿದ್ದರು. ಕಂಸಾಳೆಯನ್ನು ಕೈಯಲ್ಲಿ ಹಿಡಿದು ತಾಳ ಹಾಕುತ್ತ ಶಿವಶರಣನ ಮಹಿಮೆಗಳನ್ನು ಹಾಡುತ್ತ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಪ್ರಯಾಣ ಮಾಡುತ್ತಿದ್ದರು. ಹೀಗೆ ಪ್ರಾರಂಭವಾದ ಕಲೆಯು ಈಗ ನಾಗರೀಕತೆ ಬೆಳೆದ ಮೇಲೂ ತನ್ನ ಕಂಪನ್ನು ಉಳಿಸಿಕೊಂಡಿದೆ.

ಕಂಸಾಳೆ ನೃತ್ಯ ಹಲವು ಶತಮಾನಗಳಿಂದ ಆಚರಣೆಯಲ್ಲಿದೆ. ಈ ಕಂಸಾಳೆ ನೃತ್ಯವನ್ನು ಸಾಮಾನ್ಯವಾಗಿ 10-12 ನೃತ್ಯಗಾರರ ದೊಡ್ಡ ಗುಂಪುಗಳಲ್ಲಿ ಮಾಡಲಾಗುತ್ತದೆ. ಕಂಸಾಳೆ ನೃತ್ಯದಲ್ಲಿ ಬಳಸುವ ಹಾಡುಗಳು ಮತ್ತು ನೃತ್ಯಗಳು ಸಾಮಾನ್ಯವಾಗಿ ಭಗವಂತನನ್ನು ಸ್ತುತಿಸುತ್ತದೆ. ಸಾಮಾನ್ಯ ಜನರು ಎದುರಿಸುತ್ತಿರುವ ತೊಂದರೆಗಳನ್ನು ತಿಳಿಸುತ್ತದೆ. ಈ ರೀತಿಯಾಗಿ ಕಂಸಾಳೆ ನೃತ್ಯವೂ ಪ್ರಚಲಿತವಾಗಿದೆ, ಹಾಗೆ ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.

ರಂಜಿತ ಹೆಚ್. ಕೆ
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

Next Post

ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

post-bars

Leave a Comment

Related post