Back To Top

 ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

ಅನಾನುಭವಿ ಕವಿ ನಾನು ಪ್ರೇಮದಲೀ
ನಯಾಪೈಸೆಯೂ ತಿಳಿಯದೇ ಹುಡುಕುತಿಹೇ ಇನ್ನೂ ಅದರರ್ಥವ.
ಸಿಕ್ಕರೂ ಸಿಗಬಹುದು ನಿಮಗದರರ್ಥ ಹೊತ್ತಿಗೆಗಳಲಿ
ನಾನಂತೂ ಅರಿಯದೇ ಇರುವೆ ಇನ್ನೂ…
ಕಾರಣ ಹೊಸಬ ನಾನು ಈ ಕಸುಬಿಗೆ.

ಹೊತ್ತಲ್ಲದ ಹೊತ್ತಲೀ ಕಡು ಕಪ್ಪು ಕತ್ತಲಲಿ
ಅರೆಬರೆ ಮತ್ತಲ್ಲಿ ಹುಡುಕುವವರಿಗಂತೂ ಅದಿನ್ನೂ ಮರಿಚೀಕೆಯೇ ಸರೀ

ಮನದಿ ಮಲ್ಲಿಗೆಯಂತರಳಿಸಿ ನಿತ್ಯ ಅವಳಿಗರ್ಪಿಸಿ
ಮನದಿ ಪೂಜಿಸುವನ ಸಂಗವೇ ಇದ್ದೀರಬಹುದು ನೋಡಿ…
ನಿಮ್ಮ ಹುಡುಕಾಟದ ಪ್ರೀತಿ…

ಹಣಮಂತ ಕಾಂಬಳೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

Next Post

ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

post-bars

Leave a Comment

Related post