ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ
ಹೌದು, ಅನರ್ಹಳು ನೀ
ನನ್ನ ಪ್ರೀತಿಗೆ, ನನ್ನ ಕೋಪಕ್ಕೆ,
ಸ್ನೇಹ, ಕಾಳಜಿ, ಮಾತು, ಮೌನ
ಎಲ್ಲಕ್ಕೂ ಅನರ್ಹಳು ನೀ….
ಸ್ವಾರ್ಥ ಪ್ರೀತಿ ತುಂಬಿದ ಜಗದಲೀ,
ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು
ಅನರ್ಹಳು ನೀ…
ಭಾವ ಬತ್ತಿದವರ ನಡುವೆ
ಭಾವ ಸಾಗರ ಸೇರಲು
ಅನರ್ಹಳು ನೀ…
ಪ್ರೀತಿಯ ಮೇಲಿನ ನನಗಿದ್ದ
ಅನಂತ ನಂಬಿಕೆ ಕೊಂದವಳೇ
ಅನರ್ಹಳು ನೀ…
ಮನ ಅರಿತವನ ಮೌನ ಒಡೆದ
ಮಾತುಗಳ ಆಲಿಸದೇ ಸಾಗಿದವಳೇ
ಅನರ್ಹಳು ನೀ…
ಪ್ರೀತಿ ಗೋರಿಗೆ ಹಿಡಿಮಣ್ಣು
ಸುರಿದು ನಡೆದವಳೇ
ಅನರ್ಹಳು ನೀ….
ಕಲ್ಲೆದೆಯಲೀ ಅಪೂರ್ಣ ಕನಸೊಂದ
ಕೆತ್ತಿ ನಡೆದವಳೇ
ಅನರ್ಹಳು ನೀ….
ಅನಂತ ಪ್ರೀತಿಗೆ ಅಪವಾದವ ಹೊರೆಸಿ
ಮರೆಯದ ಪಾಠ ಕಲಿಸಿದವಳೇ
ಅನರ್ಹಳು ನೀ…
ಸಾವಿರ ಕನಸುಗಳ ಜೊತೆಗೆ ಈ ಹಾಳು
ಮನಸ್ಸನ್ನು ಛಿದ್ರಗೊಳಿಸಿದವಳೇ
ಅನರ್ಹಳು ನೀ….
ಹಣಮಂತ. ಎಂ.ಕೆ
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು