Back To Top

 ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಎಲ್ಲಾ ಭಾವ ಜೀವಿಗಳಿಗೆ ಕನಸಿನ ಹೊತ್ತಿಗೆ ಇದು. ಕಪಿಯ ಪಾತ್ರಗಳಲ್ಲಿ ನಾನಿದ್ದೇನೆ ಸಾಧ್ಯವಾದರೆ ಹುಡುಕು…. ಎಂದು ಹೇಳಿ ನೀಡಿದ್ದ ಈ ಪುಸ್ತಕ “ಹೇಳಿ ಹೋಗು ಕಾರಣ”. ರವಿ ಬೆಳಗೆರೆ ಅವರು ಬರೆದಿರುವ ಕನ್ನಡದ ಒಂದು ಅದ್ಭುತವಾದ ಕಾದಂಬರಿ. ಒಂದು ಸಾರಿ ಓದಿದರೆ ಮತ್ತೊಂದು ಬಾರಿ ಓದಲೇಬೇಕೇನಿಸುವ ಅನನ್ಯ ತ್ರಿಕೋನ ಪ್ರೇಮಕತೆ.

ಪ್ರಾರ್ಥನಾಳಂತಹ ಬಡ ಕುಟುಂಬದಿಂದ ಬಂದಂತಹ ಹುಡುಗಿಗೆ ಸಂಕಷ್ಟದ ಸರಮಾಲೆ. ಜೀವನಪೂರಾ ತುಂಬಿ ತುಳುಕುತ್ತಿದ್ದ ಅಮಾಯಕಿ, ಮುಗ್ಧೆಯು ಮೋಸಗಾತಿಯಾಗಿ, ವಂಚಕಿಯಾಗಿ ಮಾರ್ಪಾಡಾಗುವ ಪ್ರಕ್ರಿಯೆ ಇಲ್ಲಿದೆ. ಹಿಮವಂತನಂತಹ ಹಿಮಾಲಯ ಸದೃಶ ವ್ಯಕ್ತಿತ್ವದ, ಅದ್ಭುತವಾದ ಹೃದಯವಂತ ವ್ಯಕ್ತಿ ಅಕ್ಷರಶಃ ರಕ್ಕಸನಾಗಿ, ಕ್ರೂರಿಯಾಗಿ ಬದಲಾಗುವ ಪರಿ ಓದಿಸುತ್ತದೆ.

ದೇಬ ಶಿಶ್ ನಂತಹ ಕೋಟ್ಯಧೀಶ, ಶೋಕಿಲಾಲ, ಹೆಣ್ಣುಬಾಕ, ನಿಷ್ಠಾವಂತ ಪ್ರೇಮಿಯಾಗಿ, ಅಸಹಾಯಕನಾಗಿ, ಅಸ್ಥಿಪಂಜರವಾಗಿ ಒದ್ದಾಡುವ ರೀತಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಊರ್ಮಿಳೆಯಂತಹ ಚೆಲ್ಲು ಚೆಲ್ಲಾದ ಹುಡುಗಿ. ಒಂದು ದಿನವಾದರೂ ವೇಶ್ಯಾಗೃಹದ ಒಳಹೊಕ್ಕು ಬರಬೇಕು ಎಂದು ಕಾತರಿಸುವವಳು. ತನ್ನ ದಾರಿತಪ್ಪಿದ ಕಿರಿಯ ಗೆಳತಿಯನ್ನು ಮಗಳಂತೆ ನೋಡಿಕೊಳ್ಳುತ್ತಾಳೆ. ಪ್ರೀತಿಯ ಪರ್ವತವಾಗಿ, ಸಹನೆಯ ಮೂರ್ತಿಯಾಗಿ, ತ್ಯಾಗಮಯಿ ಮನುಷ್ಯಳಾಗಿ ಪರಿವರ್ತನೆ ಆಗುತ್ತಾಳೆ. ಈ ಎಲ್ಲಾ ಘಟನೆಗಳೂ ಪುಟವನ್ನು ಸರವಾಗಿ ತಿರುಗಿಸುತ್ತದೆ.

ಪುಸ್ತಕ ಕೈಯಲ್ಲಿ ಹಿಡಿದು ಕುಳಿತರೆ ಸ್ಥಳದಿಂದ ಏಳಲು ಸಾಧ್ಯವೇ ಇಲ್ಲ. ಪ್ರತಿಪುಟದ ಪದ ಪದವೂ ಓದುಗರ ಹೃದಯದಾಳಕ್ಕೆ ಇಳಿದು ಅವರ ಅಂತಃಕರಣವನ್ನು ಕಲಕದೇ ಇರದು. ಕಥೆಯನ್ನು ಓದುತ್ತ ಹೋದಂತೆ ಮುಂದೆ ಏನು ಎಂದು ಕಾಡುತ್ತದೆ. ಪ್ರಾರ್ಥನ, ಹಿಮುವಿಗೆ ಈ ರೀತಿಯ ಮೋಸ ಮಾಡುವುದು ಎಷ್ಟರ ಮಟ್ಟಿಗೆ ಸರಿ?, ಅವರಿಬ್ಬರನ್ನು ಒಂದು ಮಾಡಿದರೆ ಸಾಕು ಎಂದೆಲ್ಲಾ ತಳಮಳ ನಮ್ಮಲ್ಲಿ ಉಂಟಾಗುತ್ತದೆ. ಕಥೆಯನ್ನು ಇನ್ನು 100 ಬಾರಿ ಓದಿದರೂ ಓದಲೇ ಬೇಕು ಅಂತ ಅನಿಸಿದರೆ ಅಚ್ಚರಿಯಲ್ಲ.

ರಂಜಿತ ಹೆಚ್. ಕೆ
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

Next Post

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

post-bars

Leave a Comment

Related post