Back To Top

 ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಹೌದು, ಈಗೀಗ ತೀರಾ ಮೌನವಾಗಿಬಿಟ್ಟಿದ್ದೇನೆ. ಮಾತನಾಡಲು ಇಷ್ಟವಿಲ್ಲದೇ ಅಲ್ಲ, ಕೇಳುವವರಿಲ್ಲದೇ . ಅವಳು ಪದೇ ಪದೇ ನನ್ನ ಮಾತನಾಡಲು ಹೇಳುತ್ತಾಳೆ. ಮಾತನಾಡುವ ಬಯಕೆ ನನ್ನಲ್ಲೂ ಬೆಟ್ಟದಷ್ಟಿದೆ. ಆದರೆ ನನ್ನ ಸಂಪೂರ್ಣ ಮಾತು ಕೇಳಲು ಅವಳಲ್ಲಿ ಸಮಯವಿಲ್ಲದಿರುವಾಗ ಹೇಗೆ ತಾನೇ ಮಾತನಾಡಲೀ?  ನನ್ನ ನೋವುಗಳು ಅವಳಿಗೆ ಅರ್ಥವೇ ಆಗದಿರುವಾಗ ಏನೆಂದು ವಿವರಿಸಲಿ..? ಭಾವನೆಗಳಿಗೆ ಬೆಲೆಯೇ ಇಲ್ಲದಿರುವಾಗ ಯಾವ ಭಾವನೆಗಳ ಹಂಚಿಕೊಳ್ಳಲೀ ಅವಳೊಂದಿಗೆ..? ಸಾಲು ಸಾಲು ನೋವು ಕೊಟ್ಟು ಮೌನವಾಗಿಸಿ ಮತ್ತೆ ನನ್ನಿಂದ ಮಾತು ಬಯಸುತಾಳೇ ಅವಳು.

ಅವಳ ಬದುಕಿನಲ್ಲಿ ನನ್ನ ಮತ್ತು ಬೇರೆಯವರ ನಡುವೆ ಯಾರು ಮುಖ್ಯರೆಂದು ಕೇಳುವ ತಿಳಿಗೇಡಿ ಕೆಲಸ ನಾನೇಂದೂ ಮಾಡಲಾರೇ. ಯಾಕೆಂದರೆ ಉತ್ತರ ನಾನಲ್ಲವೆಂಬ ಸತ್ಯ ಗೊತ್ತಿದ್ದರೂ ಕೇಳಿ ಮನ ಘಾಸಿಗೊಳಿಸಿಕೊಳ್ಳುವ ಹುಚ್ಚುತನ ಬೇಡ ಎಂದು ಸುಮ್ಮನಿರುವೆ. ನನಗೆ ಸಮಯ ಮತ್ತು ಪ್ರೀತಿ ಎರಡನ್ನೂ ಕೊಡದಿರಲು ಹತ್ತಾರು ಕಾರಣಗಳು ಹುಟ್ಟಿಕೊಳ್ಳುತ್ತವೆ ಅವಳ ಬಳಿ, ಆದರೆ ಆ ಹತ್ತಾರು ಕಾರಣಗಳು ನನ್ನ ಲೆಕ್ಕಕ್ಕಿಲ್ಲದಷ್ಷು ಭಾವನೆಗಳ ಕೊಲೆಗೈದಿರುವ ಬಗ್ಗೆ ಸಣ್ಣ ಸುಳಿವು ಇರಲಿಲ್ಲ ಆಕೆಗೆ.

ಹಾಗಂತ ಅವಳ ಬಗ್ಗೆ ದೂರುತಿರುವೆ ಎಂದಲ್ಲ, ಪ್ರೀತಿ ಅವಳಲ್ಲೂ ಇದೆ. ಆದರೆ ಆಳವಾದ ಭಾವನೆಗಳಿಲ್ಲವಷ್ಟೇ. ಆದರೂ ತುಸು ಬಿಡುವು ಮಾಡಿಕೊಂಡು ಸಿಗು ಗೆಳತಿ. ಪ್ರಶ್ನೆಯೊಂದ ಕೇಳಬೇಕಿದೆ, ಯಾರಿಗಾಗಿ ನನ್ನ ನೀರ್ಲಕ್ಷಿಸಿದೆಯೋ ಅವರ ಗುಂಪಿನಲ್ಲಿ ನಿನ್ನವರೆಂದು ಯಾರಿದ್ದಾರೆ ಎಂದು..?

ಇಂದು, ನಾಳೆ ಎಂದು ಮುಂದೆ ದೂಡದಿರು ನಮ್ಮ ಭೇಟಿಯ, ಯಾಕೆಂದರೆ ತೀರಾ ವಿಳಂಬವಾದರೆ ಕಷ್ಟ. ಮುಂದೊಂದು ದಿನ ಮನದ ನೋವಿನ ಕಟ್ಟೆಯೊಡೆದು ಮೌನ ಆವರಿಸಿದರೆ ಬಲುಕಷ್ಟ. ನಿನಗಾಗಿ ಕಾಯ್ದಿಟ್ಟ ಅನಂತ ಮಾತುಗಳು ಮಣ್ಣಾಗಬಹುದು ಎಚ್ಚರ.

ಮೌನಕವಿಯ ಸ್ವಗತಗಳಿಗೆ ಹೆಸರಿಡುವ ಕೆಲಸಕೆ ಒಮ್ಮೆಯಾದರೂ ಬಿಡುವು ಮಾಡಿಕೊಂಡು ಬಾ. ಅನಂತ ಪ್ರೇಮದ, ನಿಷ್ಕಲ್ಮಶ ಪ್ರೇಮದ ಹರಿವಿದೆ ನಿನ್ನತ್ತ. ಸಾಧ್ಯವಾದರೆ ಉಳಿಸಿಕೋ. ಪ್ರೀತಿಯನ್ನು ಪ್ರೀತಿಯಿಂದಲೇ ಉಳಿಸಿಕೋ ಬೇರೇನೂ ಬೇಕಿಲ್ಲ.

ಹಣಮಂತ ಎಂ.ಕೆ 
ಪತ್ರಿಕೋದ್ಯಮ ವಿದ್ಯಾರ್ಥಿ 
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು

Prev Post

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

Next Post

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

post-bars

Leave a Comment

Related post