Back To Top

 ಬಾಟಲ್ ಜ್ಯೂಸ್ ಗಳು ಯಾರಿಗೆ ತಾನೇ ಇಷ್ಟವಿಲ್ಲ

ಚಂದ ಚಂದದ ಬಾಟಲಿನಲ್ಲಿ ತುಂಬಿಸಿಟ್ಟು ಅಂಗಡಿಯಲ್ಲಿ ನಮ್ಮ ಕಣ್ಣಿಗೆ ಆಕರ್ಷಣೆಗೊಳಗಾಗುವಂತೆ ಇಟ್ಟಿರುತ್ತಾರೆ. ನಾವು ಸಣ್ಣದಿರಿಂದಲೂ ಕೋ ಕೋ ಕೋಲಾ, ಪೆಪ್ಸಿ ಬಾಟಲಲ್ಲಿ ಶೇಖರಿಸಿಟ್ಟ ಪಾನೀಯಗಳನ್ನು ಕುಡಿಯುತ್ತಿದ್ದೇವೆ. ಅದರಲ್ಲೂ ನಾವು ಸಣ್ಣ ವಯಸ್ಸಿನಲ್ಲಿ ಈ ಪಾನೀಯೆ ಬೇಕು ಎಂದು ಹಠ ಮಾಡಿ ಪೋಷಕರಿಂದ ಕೇಳಿ ಪಡೆದುಕೊಳ್ಳುತ್ತಿದ್ದೇವು. ಪೋಷಕರಿಗೂ ಆ ತಂಪು ಪಾನೀಯದಿಂದ ಆಗುವಂತಹ ಅಪಾಯಕಾರಿ ಪರಿಣಾಮಗಳ ಅರಿವಿಲ್ಲದೆ ಮಕ್ಕಳಿಗೆ ತೆಗೆದು ಕೊಟ್ಟು ನಮ್ಮ ಸಂತೋಷವನ್ನು ನೀಗಿಸುತ್ತಿದ್ದರು. ಬಾಟಲಿನಲ್ಲಿ ಸ್ವೀಕರಿಸಿದ ಪಾನೀಯಗಳು ನಮ್ಮ ದೇಹಕ್ಕೆ ಬಹಳ ಅಪಾಯಕಾರಿ ಎಂದು ತಿಳಿದು ಬಂದಿದೆ. ನಮ್ಮ ದೇಹಕ್ಕೆ ಅಪಾಯಕಾರಿ ಎಂದು ವೈದ್ಯಕೀಯ ದೃಷ್ಟಿಕೋನದಿಂದ ನೋಡುವ ಮೊದಲು ಬಹಳ ಸುಲಭವಾಗಿ ತಿಳಿದುಕೊಳ್ಳೋಣ. ಫೇಮಸ್ ಸೆಲೀಬ್ರಿಟಿಗಳಾದ ರಶ್ಮಿಕ ಮಂದಣ್ಣ ,ರಣ್ಬೀರ್  ಕಪೂರ್  ಮತ್ತು ರಾಕಿಂಗ್ ಸ್ಟಾರ್ ಯಶ್ ಹೀಗೆ ಬಹಳಷ್ಟು ಮಂದಿ ಪೆಪ್ಸಿ, ಕೋ ಕೊ ಕೋಲಾ ಮತ್ತು ಫ್ರೂಟಿ ಮುಂತಾದ ಬಾಟಲ್ ಜ್ಯೂಸ್ ಗಳಿಗೆ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ ನಟಿ ಆಲಿಯಾ ಭಟ್ ರವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಒಂದು ಶೋನಲ್ಲಿ ಶೋ ನಡೆಸುವವ ಆಲಿಯ ಬಟ್ ಳಿಗೆ  ಫ್ರೂಟೀ ಎಂಬ ಮ್ಯಾಂಗೋ ಬಾಟಲ್ ಜ್ಯೂಸ್ ಅನ್ನು ಕೊಡುತ್ತಾರೆ. ಆಕೆ ಅದನ್ನು ಮುಟ್ಟಿ ಸಾ ನೋಡುವುದಿಲ್ಲ. ಆಕೆ ಹೇಳುತ್ತಾಳೆ, “ಶುಗರ್  ಇಸ್ ನಾಟ್ ಗುಡ್” ಎಂದು. ಅಯ್ಯೋ ಫ್ರೂಟಿಯೆಂಬ ತಂಪು ಪಾನೀಯದ ರಾಯಭಾರಿ ಆಲಿಯಾ ಭಟ್ ಈಕೆಯೇ ಈ ಜ್ಯೂಸನ್ನು ಕುಡಿಯಲಿಲ್ಲವೆಂದರೆ ಇನ್ನು ಜಾಹೀರಾತಿನಲ್ಲಿ ಹೇಳಿದ ಮಾತಿಗೆ ಅದೆಷ್ಟು ಜನರು ಜ್ಯೂಸನ್ನು ಕುಡಿಯುತ್ತಿರಬಹುದು!!.

ವಿಷಯವೇನೆಂದರೇ ಸಕ್ಕರೆ ನಮ್ಮ ದೇಹಕ್ಕೆ ಒಂದು ದೊಡ್ಡ ಶತ್ರು. ಅದನ್ನು ಎಷ್ಟು ಮಿತವಾಗಿ ಇಡುತ್ತೇವೋ ಅಷ್ಟು ನಮ್ಮ ದೇಹಕ್ಕೆ ಒಳ್ಳೆಯದು. ಅತಿ ಹೆಚ್ಚು ಸಕ್ಕರೆ ಸೇವಿಸುವುದರಿಂದ  ದೇಹದ ತೂಕ, ನಿದ್ರೆಯಲ್ಲಿ ಸಮಸ್ಯೆ, ಅಧಿಕ ರಕ್ತದ ಒತ್ತಡ, ಹಲ್ಲುಗಳು ಹುಳುಕಾಗುವುದು,
ಮಧುಮೇಯ , ಹೃದಯದ ಕಾಯಿಲೆಗಳು ಮುಂತಾದ ಸಮಸ್ಯೆಗಳು ದೇಹದಲ್ಲಿ ಕಾಣಬರುತ್ತದೆ. ಹಿಂದೆ ಹೇಳಿದ ಹಾಗೆ  ಸಕ್ಕರೆಯನ್ನು ಎಷ್ಟು ಮಿತವಾಗಿ ಬಳಸ್ತೀವೋ ಅಷ್ಟು ದೇಹಕ್ಕೆ ಒಳ್ಳೆಯದು ಎಂಬ ಮಾತಿನಂತೆ ಬಾಟಲಿ ಜ್ಯೂಸ್ ನಲ್ಲಿ ಇರುವಂತಹ ಸಕ್ಕರೆ ಮಿತಿಯೋ ಹೆಚ್ಚೊ? ಉದಾಹರಣೆಗೆ ನಾವು ಆರೋಗ್ಯಕರ ಪಾನೀಯ ಎಂದು ನಂಬಿಕೊಂಡಿರುವ ಆರೆಂಜ್ ಜ್ಯೂಸನ್ನ ತೆಗೆದುಕೊಳ್ಳೋಣ. ಟೆಟ್ರಾ ಪ್ಯಾಕ್ ಎಂದು ಕರೆಯಲ್ಪಡುವ ಹತ್ತರಿಂದ ಇಪ್ಪತ್ತು ರೂಪಾಯಿ ಜ್ಯೂಸು. ಕಿತ್ತಳೆ ಇಂದ ವಿಟಮಿನ್ ಸಿ ದೊರೆಯುತ್ತದೆ ಎಂದು ಈ  ಜ್ಯೂಸ್ ಕುಡಿಯುವ ಮುನ್ನ ಪ್ಯಾಕೆಟ್ ಹಿಂಭಾಗದ ಕಡೆ ಗಮನಹರಿಸಬೇಕು.

ನ್ಯೂಟ್ರಿಷನಲ್ ಇನ್ಫಾರ್ಮಶನ್ ಅಂದರೆ ಪೌಷ್ಟಿಕಾಂಶಗಳ ಮಾಹಿತಿ ಎನ್ನುವ ಕಾಲಮ್ ಇರುತ್ತದೆ . ಪ್ರತಿ 100 ಗ್ರಾಂಗೆ ಯಾವ ಯಾವ ವಿಟಮಿನ್ಸ್ ಎಷ್ಟೆಷ್ಟು ಗ್ರಾಮ್ ನಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ಇರುತ್ತದೆ. ಆ ಕಾಲಮ್ನಲ್ಲಿ ಎನರ್ಜಿ, ಪ್ರೊಟೀನ್ ,ಶುಗರ್, ವಿಟಮಿನ್ ಸಿ ,ಸೋಡಿಯಂ ಮುಂತಾದ ವಿಟಮಿನ್ಸ್ ಹಾಗೂ ಇನ್ನಿತರ ಪೌಷ್ಟಿಕಾಂಶಗಳನ್ನು ಪಟ್ಟಿ ಮಾಡಿರುತ್ತಾರೆ. ವಿಟಮಿನ್ಸ್ ಗಳ ಬಗ್ಗೆ ಯೋಚಿಸುವ ಮುನ್ನ ಮೊದಲು ಸಕ್ಕರೆ ಮತ್ತು ಉಪ್ಪುವಿನ ಅಂಶವೂ ಎಷ್ಟೆಷ್ಟಿದೆ ಎಂದು ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಸಕ್ಕರೆ ಅಂಶವೂ ಅವಶ್ಯಕತೆಗಿಂತ ಹೆಚ್ಚಿರುತ್ತದೆ ‌ ಯಾಕೆಂದರೆ ನಮಗೆ ಸಿಹಿಯ ಅನುಭವವನ್ನು ಕೊಡಲು ಹಾಗೂ ನಮ್ಮ ದಣಿವನ್ನು ನೀಗಿಸಬೇಕೆಂದು. ಸಕ್ಕರೆ ನಮ್ಮ ದೇಹಕ್ಕೆ ಕೂಡಲೇ ಸೇರಿದಾಗ ನಮಗೆ ಒಳ್ಳೆಯ ಡೋಪಮೈನ  ಅನುಭವ ಆಗುತ್ತದೆ. ಇದರಿಂದ ನಮಗೆ ಸಂತೋಷದ ಅನುಭವ ಸಿಗುತ್ತದೆ. ಇನ್ನು ಸೋಡಿಯಂ ಅಂದರೆ ಉಪ್ಪಿನ ಅಂಶ. ಯಾಕೆ ಈ ಜ್ಯೂಸಿನಲ್ಲಿ ಬಳಸುತ್ತಾರೆ?ಹೆಚ್ಚು ಉಪ್ಪನ್ನು ತಿಂದರೆ ನಮಗೆ  ನಮಗೆ ದಾಹ  ಉಂಟಾಗುತ್ತದೆ. ಹೆಚ್ಚು ನೀರನ್ನು ಕುಡಿಯುವ ಸಾಧ್ಯತೆ ಇರುತ್ತದೆ . ಈ ಉಪಾಯವನ್ನು ಜ್ಯೂಸ್ ಕಂಪನಿಯವರು ಬಳಸಿಕೊಂಡು ಸಕ್ಕರೆ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಉಪ್ಪಿನ ಪ್ರಮಾಣವನ್ನು ಬಳಸಿರುತ್ತಾರೆ. ಈ ಕಿತ್ತಳೆ ಜ್ಯೂಸಲ್ಲಿ 20 ರಿಂದ 30 ಗ್ರಾಂ ಸಕ್ಕರೆ ಬಳಸಿದ್ದಾರೆ. ಗ್ರಾಮಿನಷ್ಟು ಸಕ್ಕರೆ ಸೇವಿಸಿದರೆ ದೇಹಕ್ಕೆ ಏನು ಆಗೋದಿಲ್ಲ ಎಂದು ಯೋಚನೆ ಮಾಡಿ ಸತತವಾಗಿ ಕುಡಿಯುತ್ತಲಿದ್ದರೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. 30 ಗ್ರಾಂ ಸಕ್ಕರೆ ಹತ್ತರಿಂದ ಇಪ್ಪತ್ತು ಜನರಿಗೆ ಟೀ ಮಾಡಲು ಬಳಸುವ ಪ್ರಮಾಣ!!. ವಿಟಮಿನ್ ಸಿ ನಮ್ಮ ದೇಹಕ್ಕೆ ತುಂಬಾ ಮುಖ್ಯ ಹಾಗಂತ ನಾವು ಈ ರೀತಿಯ ಬಾಟಲಿ ಜ್ಯೂಸನ್ನು ಕುಡಿಯುವುದರ ಮೂಲಕ ಪೂರ್ತಿ ಗೊಳಿಸುವುದು ಒಳ್ಳೆಯ ಮಾರ್ಗವಲ್ಲ. ಒಂದು ಸಣ್ಣ ನಿಂಬೆಹಣ್ಣಿನಲ್ಲಿ 100 ಪಟ್ಟು ವಿಟಮಿನ್ ಸಿ ಅಂಶವು ಇರುತ್ತದೆ. ದಿನಕ್ಕೆ ಒಂದು ನಿಂಬೆಹಣ್ಣನ್ನು ಸೇವಿಸಿದರೂ ಸಾಕು.

ಸಕ್ಕರೆ ಸೇವಿಸಿದನ್ನು ತ್ಯಜಿಸುವುದರಿಂದ ನಮ್ಮ ತ್ವಚೆಯ ಆರೋಗ್ಯ ಸರಿಯಾಗಿರುತ್ತದೆ. ಹೊಳಪು ಹೆಚ್ಚುವುದು ಖಂಡಿತ. ಹೃದಯದ ಸಮಸ್ಯೆ ಆಗಿರಬಹುದು ಲಿವರ್ ಮತ್ತು ಇತರ ಅಂಗಾಂಗಗಳ ಸಮಸ್ಯೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಸಕ್ಕರೆ ಸೇವಿಸುವುದನ್ನು ತ್ಯಜಿಸಿ ಒಳ್ಳೆಯ ಆರೋಗ್ಯವನ್ನು ರೂಪಿಸಿಕೊಳ್ಳಿ.

ತರುಣ್ ಶರಣ್
ಬಿ‌. ವೋಕ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ವಿದ್ಯಾರ್ಥಿ

Prev Post

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

Next Post

Gulbarga University: ಗಮನ ಸೆಳೆಯುವ ಗುಲ್ಬರ್ಗಾ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ ಬರಹಗಾರರ ಫೋಟೋ…

post-bars

Leave a Comment

Related post