ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ
ಕೋಟಿ ಕೋಟಿ ಪ್ರೇಮ ಪತ್ರಗಳ
ಸುಂದರ ಸೋಜಿಗ ಭಾವನೆಗಳನ್ನು ಬೆರೆಸಿ
ನೀ ಉಣಬಡಿಸಿದ ರಸಮಯ ರುಚಿಯ
ರಸಾನುಭವವನ್ನು ಸವಿಯುವಾಗ
ಮನದಾಳದಲ್ಲಿ ಸಪ್ತಪದಿಯಿಡುತ್ತಿಹುದು
ಅರುಂದತಿ ನಕ್ಷತ್ರ ಬಣ್ಣಿಸಿದ ಪ್ರೇಮ ಸ್ವರಗಳ ಮಾಯೆ…
ಥಳ ಥಳ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳೆಲ್ಲವನ್ನು
ಕೆಳ ಬೀಳಿಸುವ
ಕಾರದ ಪುಡಿ, ಸಾಂಬಾರ್ ಪುಡಿಯ
ಪಾತ್ರಗಳನ್ನೆ ಅದಲು ಬದಲಿಸುವ
ನಿನ್ನ ಮಗು ಮನಸ್ಸಿನ ತುಂಟತನವನ್ನು ನೆನಯುವಾಗ
ಕಣ್ಣ ಹನಿಗಳ ನಡುವೆ ಸಿಲುಕಿ ನಲಿದಾಡುತ್ತಿಹುದು ತಾಯಿತನದ
ಧಾರೆ….
ನೀ ಮಾಡಿದ ಅಡುಗೆಯ ಸವಿ ಅಮೃತಮಯ ಎನಲಾರೆ…
ಅಮೃತ ಸವಿದ ದೇವತೆಯು ನಾ ಆಗಲಾರೆ..
ಸದಾ ನೀ ಜೊತೆಯಾಗುವೆಯೆಂಬ ಭರವಸೆಯ
ಸುಂದರ ಮಾನವ ಜನುಮ ನನ್ನೊಂದಿಗಿರುವಾಗ
ದೈವದ ಸ್ಥಾನವು ಎನಗೇಕೆ….?
–ಶಿಲ್ಪ ಬಿ
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು