Back To Top

 ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

ಇರುಳಿನ ಮಾಯೆ
ತಂಗಾಳಿ ಸುರಿಸುತ್ತಿರುವ ಸಿಹಿಮುತ್ತುಗಳ
ಸುರಿಮಳೆಯ ಆಭರಣವ ತೊಟ್ಟು,
ಹೆಜ್ಜೆಯ ಜೊತೆ ಹೆಜ್ಜೆಯನಿಡುತ್ತಿರುವ
ಬೆಳದಿಂಗಳ ಚಂದ್ರನಿಗೊಮ್ಮೆ ಮನವ ಸೋತು,
ಮಿಂಚಿ ಮಿನುಗುತ್ತಿರುವ ನಕ್ಷತ್ರಾಲಯದ
ಯೌವನದ ತಾಳಕೊಮ್ಮೆ ಹೆಜ್ಜೆಯನಿಟ್ಟು,
ಸುಂದರ ಮೌನದಲ್ಲೂ ಅರಳುತ್ತಿರುವ ನಿನ್ನ ಮನಸ್ಸಿನ ಸ್ವರಕೊಮ್ಮೆ ಕಿವಿಯ ಕೊಟ್ಟು,
ಮುಗಿಲ ಮನಸ್ಸಿನ ಅರಮನೆಯಲ್ಲಿ ನೀ ಅರಗಿಣಿಯಾಗಿ
ನಡೆಯುತ್ತಿರುವಾಗ ನಿನ್ನ ಭಾವನೆಗಳನ್ನು ಮೀರಿಸಿದ ಸ್ವರ್ಗ ಯಾವುದು…?

ಶಿಲ್ಪ ಬಿ.
ಪ್ರಥಮ ಪಿ.ಯು.ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು

Prev Post

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

Next Post

ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

post-bars

Leave a Comment

Related post