Back To Top

 ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ರೆಲ್ಲ ಸುತ್ತಾಡಿ ಸುತ್ತಾಡಿ ಆಯಾಸಗೊಂಡ ಕಾಗೆ ವಿಶ್ರಾಂತಿ ಪಡೆಯಲೆಂದು ಒಂದು ಮರದ ಮೇಲೆ ಹಾರಿ ಹೋಗಿ ಕುಳಿತುಕೊಳ್ತು. ಮಗ್ಗುಲಲ್ಲೆ ಕುಳಿತಿದ್ದ ಕೋಗಿಲೆಯನ್ನು ಕಂಡು ಸಂತೋಷಗೊಂಡ ಕಾಗೆ
“ಓಹೋ….! ಕೋಗಿಲೆಗೆ ನಮಸ್ಕಾರಗಳು. ಏನು ಕೂ.. ಕೂ ಎಂದು ಹಾಡುವ ನೀನು, ಒಂಟಿಯಾಗಿ ಇಲ್ಲಿ ಮೌನವಾಗಿ ಕುಳಿತಿರುವೆ ಏನು ಸಮಾಚಾರ?” ಎಂದು ಕೇಳಿತು.
ಕೋಗಿಲೆ : ಅಯ್ಯೋ…! ಏನು ಮೌನವೋ, ಏನು ಕಥೆಯೊ… ಬದುಕೇ ಜಿಗುಪ್ಸಾಮಯವಾಗಿ ಹೋಗಿದೆ.
ಕಾಗೆ : [ಇದೇನಿದು ನಾನು ಹೇಳಬೇಕಾದ ಡೈಲಾಗ್‌ ಅನ್ನು ಇದು ಹೆಳುತಿದ್ದೆಯಲ್ಲ?]. ಯಾಕೆ ಏನಾಯಿತು?
ಕೋಗಿಲೆ : ಸಪ್ತ ಸ್ವರಗಳನ್ನು ಕೂಡಿಸಿ ಮೇಘರಾಜನ ಮೌನವೇ ಕರಗಿ ನೀರಾಗುವಂತಹ ಸಂಗೀತವನ್ನು ಹಾಡಿದರು. ಕೇಳಿಸಿಕೊಳ್ಳಲು ಯಾರು ಇಲ್ಲ ಇಲ್ಲಿ ನೋಡು. ಏನು ಮಾಡುವುದು?
ಕಾಗೆ : ಅಂತಹ ಹಾಡನ್ನು ಮೇಘರಾಜ ಬಿಟ್ಟು, ಇನ್ಯಾರು ತಾನೆ ಕೇಳಿಸಿಕೊಳ್ಳಲು ಸಾಧ್ಯ? (ನಗುತ್ತ..) ಯಾಕ್ ಹೀಗಾಡುತ್ತಿದ್ದೀಯ.. ಇವತ್ತು. ಏನಾಗಿದೆ ನಿನಗೆ?
ಕೋಗಿಲೆ: ನಾವೀಗ ಎಲ್ಲಿದ್ದೇವೆ ಎಂದು ನೋಡಲಿಲ್ಲವ ನೀನು?
ಕಾಗೆ : ನಾವಾ….? ಎಲ್ಲಿದ್ದೇವೆ?
ಕೋಗಿಲೆ: ಇನ್ನೆಲ್ಲಿ… ಶ್ರೀರಂಗಪಟ್ಟಣದ ನದಿ ಸಂಗಮ ಹತ್ತಿರ. ಅದೆಷ್ಟೆ ಇಂಪಾಗಿ, ಶೃತಿಬದ್ಧವಾಗಿ ಹಾಡಿದರು, ನನ್ನ ಧ್ವನಿಗೆ ಬೆಲೆಯೇ ಇಲ್ಲ, ನೋಡಿ ಇಲ್ಲಿ.
ಕಾಗೆ : ಓ… ಓಹೋ ಇದ ವಿಷಯ. ಏನಿದು ಕೋಗಿಲೆ…? ನೀನೆ ಹೀಗೆ ಮಾತನಾಡಿದರೆ. ಬದುಕಿನುದ್ದಕ್ಕೂ ನೋವಿಲ್ಲದ, ಬರೇ ನಗುವೆ ಇದ್ದರೆ, ನಗುವಿಗೆ ಅರ್ಥವಿದೆಯೇ ಹೇಳು. ನೀನು ಹಾಡಿದ ಪ್ರತಿ ಸಾರಿಯು ನಿನ್ನ ಧ್ವನಿಯನ್ನು, ಎಲ್ಲರೂ ಉತ್ಸಾಹಭರಿತವಾಗಿ ಕೇಳಿದರೆ, ನಿನ್ನ ಧ್ವನಿಗೆ ಅರ್ಥವಾದರು ಎಲ್ಲಿದೆ? ಚಿಂತೆ ಯಾಕೆ ಮಾಡುತ್ತೀಯ. ಇಲ್ಲಿಲ್ಲದಿದ್ದರೆ ಮತ್ತೊಂದು ಕಾಡೆ ಕೇಳಿಸಿಕೊಳ್ಳುವವರು ಇದ್ದೇ ಇರುತ್ತಾರೆ ಅಲ್ಲವೇ? ನಿನಗಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯೇ. ಅವಕಾಶಗಳನ್ನು ಹುಡುಕಲು ನೂರು ದಾರಿಗಳಿವೆ. ಚಿಂತೆ ಏತಕ್ಕೆ.
ಕೋಗಿಲೆ : (ನಗುತ್ತಾ)… ಹೌದಲ್ಲವ… ಸರಿ ನಾನು ಈಗಲೇ ಬೇರೆ ಕಡೆಗೆ ಹಾರುವೆ…
ಕಾಗೆ : ಬೇಡ ಬೇಡ….
ಕೋಗಿಲೆ : ಯಾತಕ್ಕೆ?
ಕಾಗೆ : ಸ್ವಲ್ಪ ಹೊತ್ತು ಇಲ್ಲೇ ಇದ್ದು. ಈ ಭಾವನೆಯನ್ನು ಒಮ್ಮೆ ಅನುಭವಿಸಿ ನೋಡು. ಎಷ್ಟು ಚಂದ ಇರುತ್ತೆ ಎಂದು. ನಿನ್ನ ಮೊಮ್ಮಕ್ಕಳಿಗೆ ನಿನ್ನ ಜೀವನ ಚರಿತ್ರೆಯನ್ನು ಹೇಳುವಾಗ, ಕತೆಯಲ್ಲಿ ಆಗಾಗ ಇಂತಹ ಘಟನೆಗಳಿದ್ದರೆ, ಕತೆಯು ರೋಮಾಂಚಕವಾಗಿರುತ್ತದೆ ಅಲ್ಲವಾ..?
ಕೋಗಿಲೆ : ಆ….ಆಹಾ..!! ನೋವನ್ನು ಅನುಭವಿಸಿ ನೋಡು. ಎಷ್ಟು ಚಂದ ಇರುತ್ತೆ ಎನ್ನುವ ಏಕೈಕ ವ್ಯಕ್ತಿ ನೀನೆ ನೋಡು.
ಸರಿ ನೀನೀಗ ಹೊರಡು. ನಿನಗೋಸ್ಕರ ಕೆಳಗಡೆ ತುಂಬ ಜನ ಕಾಯುತ್ತಿದ್ದಾರೆ. ಈಗ ನಿನ್ನ ಮಧುರವಾದ ಧ್ವನಿ ಕೇಳದಿದ್ದರೆ, ಪಿಂಡವನ್ನು ಹಿಡಿದು ಕಾ….ಕಾ… ಎಂದು ಕೂಗುತ್ತಾ ಅವರೇ ಸಾಯುವ ಹಾಗಿದ್ದಾರೆ.

ಶಿಲ್ಪ. ಬಿ
ಪ್ರಥಮ ಪಿ.ಯು.ಸಿ.
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು

Prev Post

ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ

Next Post

ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

post-bars

Leave a Comment

Related post