Back To Top

 ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ

ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ

ಎಂದೋ ರಚಿಸಿದ ಬಣ್ಣ ಬಣ್ಣದ
ಕನಸುಗಳ ಚೀಲ
ಯಾರೋ ತುಂಬಿದ ಹಸಿ ಬಿಸಿ
ಉಸಿರಿನ ಭಾವ..

ಆ ಕನಸುಗಳಿಗೆ ಕನಸಾಗಿ
ತಂದೆಯಂತೆ ಹೊರುವ ಹೆಗಲಿಗು
ತಿಳಿದಿಲ್ಲ
ಅದು ತನ್ನದಲ್ಲವೆಂಬ ಸತ್ಯ

ಆ ಉಸಿರಿಗೆ ಉಸಿರಾಗಿ
ತಾಯಿಯಂತೆ ಪೊರೆಯುವ ಮೆದು ಸ್ಪರ್ಶಕೂ
ತಿಳಿದಿಲ್ಲ
ಅದು ತನ್ನದಲ್ಲವೆಂಬ ವಾಸ್ತವ..

ಆದರೆ ಹಸಿವೆಂಬ ಬೇತಾಳ ಒಮ್ಮೆ ಬೆನ್ನಟ್ಟಿದಾಗ
ಎಲ್ಲವು ವಿಧಿ ತೋರಿದ ಹಾಗೆ ಎಂಬ
ಸಮಧಾನದ ಮಾತೊಂದನ್ನೆ
ಹಿಂಬಾಲಿಸುವುದಲ್ಲವೇ..?
ಇಡುವ ಪ್ರತಿಯೊಂದು ಹೆಜ್ಜೆಯ ಗುರುತು
ಪ್ರತಿ ಧ್ವನಿಸುವ ಪ್ರತಿಯೊಂದು ಮುಗುಳುನಗೆಯ ಮಾತು

ಶಿಲ್ಪ ಬಿ
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು

Prev Post

ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ

Next Post

ಕುಪ್ಪಳ್ಳಿ ಪ್ರವಾಸದ ಮರೆಯಲಾಗದ ನೆನಕೆಗಳು| ಮಾನಸ ಜಿ

post-bars

Leave a Comment

Related post