Back To Top

 ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ, ಪ್ರತಿನಿತ್ಯ ಧ್ಯಾನಿಸುವಳು
ತನ್ನ ಮಗುವಿನ ಬದುಕು
ಹೂವಿನ ತೋಟವಾಗಿ ಅರಳಲಿ ಎಂದು…
ಅದರ ಪ್ರತಿಫಲವಾಗಿ ಆ ತೋಟದ ಮಾಲಿಕತ್ವವನ್ನು
ಬಯಸುವವಳಲ್ಲ ಅವಳು.

ಅದೆಷ್ಟೆ ಸಹನ, ತ್ಯಾಗ ಜೀವಿಯಾದರು
ಅವಳು ಎಲ್ಲರಂತೆ ಮನುಷ್ಯಳಲ್ಲವೆ?
ಆ ತೋಟದಲ್ಲಿ ಸಣ್ಣದೊಂದು ಜೇನಾಗಿ
ಜೀವಿಸುವ ಬಯಕೆ ಅವಳಲ್ಲಿರುವುದು ಸಹಜವಲ್ಲವೇ?

ಓದಲು, ದುಡಿಯಲು ಬಹಳಷ್ಟಿದೆ ನಮಗೆ
ಭವಿಷ್ಯ ಕಟ್ಟಿಕೊಳ್ಳುವ ಭರದಲ್ಲಿ
ಅದರಿಂದ ಉಣ್ಣುವ ಅನ್ನದಲ್ಲಿ
ಮಲಗುವ ಹಾಸಿಗೆಯಲ್ಲಿ,
ಅವಳ ಹಾರೈಕೆಯೆ ಇಲ್ಲದೆ,
ನಮ್ಮ ನಗುವೆಲ್ಲಿದೆ…..?

ಇದು ಅವಳ ಕಾಲವಲ್ಲ,
ಅವಳಿಗೇನು ತಿಳಿದಿದೆ ಪ್ರಪಂಚದ ಜ್ಞಾನ?
ಅವಳೇನು ಬಲ್ಲಳು ನಾವು ಬದುಕನ್ನು ಕಟ್ಟಿಕೊಳ್ಳಲು
ಪಡುತ್ತಿರುವ ಪಾಡು?

ಆದರೇ ಅವಳ ಮುಗ್ಧತೆಯೇ ಕಾರಣವಾದ್ದದು
ಅವಳೊಡನೆ ಹುಸಿ ನುಡಿದು
ನಾವು ಗೆಳೆಯರೊಡನೆ ಚಿತ್ರಮಂದಿರಕ್ಕೆ
ತೆರಳಿ ಸಂಭ್ರಮಿಸಲು..

ಅವಳ ಮುಗ್ಧತೆಯ ಪರಿಮಳವೇ ಕಾರಣವಾದ್ದದು
ನಮ್ಮ ಆ ಯೌವನದ ದಿನಗಳು
ಸಖ ಸಖಿಯೊಡನೆ ಹಸಿರಾಗಲು….

“ಅಮ್ಮ ನಾನು ಸದಾ ನಿನ್ನ ಜೊತೆಯಿರುವೆಯೆಂದು”
ಸಮಾಜಿಕ ಜಾಲತಾಣದಲ್ಲಿ ನಾವೆಸೆಯುವ
ಆಡಂಬರದ ಭವಿಷ್ಯವಾಣಿಯನ್ನು ಇಚ್ಛಿಸುವುದಿಲ್ಲ ಅವಳು.

ವರ್ಷಕ್ಕೊಮ್ಮೆ ತಾಯಿಂದರ ದಿನದಂದು
ಬೃಹತ್ತಾದ ಕೇಕ್ ಅನ್ನು ಕತ್ತರಿಸುವ
ಬಯಕೆ ಅವಳದ್ದಲ್ಲ..

ಹೊರಹೋಗುವಾಗ “ಅಮ್ಮ ಹೋಗಿ ಬರುವೆ, ಬಾಯ್”
ಎಂಬ ಮಾತನ್ನು ಕೇಳಿ,
ದಿನವೆಲ್ಲ ಸಂಭ್ರಮಿಸುವ ಜೀವ ಅವಳದ್ದು…

ಅಮ್ಮನ ಬೈಗುಳವಿಲ್ಲದೆ ದಿನವೇ
ಪ್ರಾರಂಭವಾಗದ, ಆ ದಿನಗಳು
ನೆನಪಿದೆಯೇ?
ಅವಳಿನ್ನು ಬದುಕಿರುವಾಗ ಆ ಅನುಭವೇಕೆ
ಇನ್ನು ಆ ದಿನಗಳಲ್ಲೆ ಉಳಿದಿದೆ?

ಶಿಲ್ಪ .ಬಿ 
ಪ್ರಥಮ ಪಿ ಯು ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು 

Prev Post

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

Next Post

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

post-bars

Leave a Comment

Related post