Back To Top

 ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ : ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದಲ್ಲಿ  ಎರಡು ದಿನಗಳ ( 14, 15 ) ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  “ಝೇಂಕಾರದ” 5ನೇ ಆವೃತ್ತಿಯ ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ.

ಇದನ್ನು ಖಾಸಗಿ ಮಾಧ್ಯಮದಲ್ಲಿ ರಮೇಶ್‌ ಅರವಿಂದ ನಡೆಸಿಕೊಡುತ್ತಿದ್ದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಂತೆ ರೂಪಿಸಲಾಗಿತ್ತು. ಹಾಟ್ ಸೀಟ್‌ನಲ್ಲಿದ್ದ ರಮೇಶ್ ಅರವಿಂದ್ ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು. ಯಶಸ್ವಿನ ರಹಸ್ಯ, ವೀರೇಂದ್ರ ಹೆಗ್ಗಡೆ ಜೊತೆಯ ಒಡನಾಟ, ಸಿರಿ ರಾಯಭಾರಿಯಾಗಿ ಅನುಭವ, ರ‍್ಯಾಪಿಡ್ ಪೈರ್, ವೈಯಕ್ತಿಕ ಬದುಕಿನ ಅವರ ವಿವರಣೆಗಳಿದ್ದವು.

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳಿಗೆ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಗೌರವ ಉಪಸ್ಥಿತರಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರುದ್ಯೋಗದಲ್ಲಿರುವ ಯುವಕ ಯುವತಿಯರಿಗೆ ತರಬೇತಿ ಕೊಟ್ಟ ನಂತರ ಅವರಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಆರಂಭವಾಗಿದೆ. ಕಳೆದ 20 ವರ್ಷಗಳಲ್ಲಿ 200 ಕ್ಕೂ ಅಧಿಕ ಉತ್ಪನ್ನಗಳು ಸಿರಿಯಿಂದ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಸಾವಿರಾರು ಉದ್ಯೋಗ ಸೃಷ್ಟಿ ಮಾಡಿದ್ದು, ನಾಲ್ಕು ಸಾವಿರ ಕುಟುಂಬಗಳಿಗೆ ಆಧಾರವಾಗಿದೆ ಎಂದು ಸಿರಿ ಗ್ರಾಮೋದ್ಯೋಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್ ಜನಾರ್ದನ್ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ಪ್ರೊ. ವಿಶ್ವನಾಥ ಪಿ., ಕೊಡಗು ವಿವಿ ಉಪ ಕುಲಪತಿ ಪ್ರೊ. ಅಶೋಕ್ ಎಸ್ ಅಲೂರ್ ಉಪಸ್ಥಿತರಿದ್ದರು.

Prev Post

ಅಮ್ಮ ತಪಸ್ವಿ | ಶಿಲ್ಪ .ಬಿ 

Next Post

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

post-bars

Leave a Comment

Related post