Back To Top

 ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ.

ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ ಹೇಳುವುದರಿಂದ ಉಂಟಾಗುವ ಕೊನೆಯವರೆಗಿನ ಕಾಯುವಿಕೆ ; ಹೀಗೆ ಅರ್ಧ ಸತ್ಯ, ಅರ್ಧ ಸುಳ್ಳನ್ನು ಹೊತ್ತುಕೊಂಡು ಬಂದ ರಾಮದಾಸನ ಮನಸ್ಸು , ಮಗನ ಕೋಣೆಯ ಮಂಚದಡಿಯ ಪೆಟ್ಟಿಗೆಯೊಳಗಿದ್ದʼ ಮೆಡಿಕಲ್ ರಿಪೋರ್ಟ್‌ʼ ನ ಸುತ್ತ ಹರಿದಾಡುತ್ತಿದೆ. ಆʼ ಮೆಡಿಕಲ್ ರಿಪೋರ್ಟ್‌ʼನ ವರದಿಯೇ ಈ ಕಥೆಗೆ ಮಂಗಳ ಹಾಡುತ್ತದೆ. ಹೀಗೆ ತಾನು ಕೇಳಿದ್ದು, ಸುತ್ತ ಮುತ್ತಲಿನ ಘಟನೆಗಳನ್ನೆಲ್ಲಾ ಸೇರಿಸಿಕೊಂಡು ಬರೆದಿರುವ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ, ಅರ್ಧ ಸುಳ್ಳು’.

ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ? ರಾಮದಾಸರ ಮಗ ಸಾಗರ್‌ ಕಳೆದ 10 ದಿನಗಳಿಂದ ಕಾಣೆಯಾಗಿರಲು ಕಾರಣವೇನು? ಎಸ್ಟೇಟಿನ ಪಾಳುಮನೆಯಲ್ಲಿ ಎಳೆ ಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ? ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್‌ ಮೋಲ್ಡ್‌ ಅಚ್ಚುಗಳು ನೀಡುತ್ತಿದ್ದ ಸಂದೇಶಗಳೇನು? ಇದು ” ಅರ್ಧ ಸತ್ಯ, ಅರ್ಧ ಸುಳ್ಳು ” ತುಂಬಿರುವ ಸೇಡಿನ ಕಥೆ ! . ” ಅರ್ಧ ಸತ್ಯ, ಅರ್ಧ ಸುಳ್ಳು ” ಹೆಸರೇ ಸ್ವಲ್ಪ ವಿಶೇಷವಾಗಿರುವ ಹಾಗೆ, ಈ ಪುಸ್ತಕದ ಲೇಖಕನೂ ಹಾಗು ಅವರ ಚಿಂತನೆಗಳೂ ವಿಶೇಷವಾದುದು. ಕೌಶಿಕ್‌ ಕೂಡುರಸ್ತೆ, ಹಾಸನ ಜಿಲ್ಲೆಯ ಸಕಲೇಶಪುರದ ಕೂಡುರಸ್ತೆಯವರು. ವೃತ್ತಿಯಲ್ಲಿ ಸಹಾಯಕ ನಿರ್ದೇಶಕರು. ನಿರ್ದೇಶಕನಾಗಬೇಕೆಂಬ ಗುರಿ ಹೊಂದಿರುವುದರ ಜೊತೆಗೆ ತಾನು ಬರೆದ ಕಾದಂಬರಿಯ ಕಥೆಯು ತೆರೆಯ ಮೇಲೆ ಬರಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಪತ್ತೇದಾರಿ ಸಾಹಿತ್ಯಕ್ಕೆ ಓದುಗರಿಲ್ಲ ಎಂಬ ಮಾತನ್ನು ತನ್ನ 4 ಪತ್ತೇದಾರಿ ಕಾದಂಬರಿಗಳ ಮೂಲಕ ಸುಳ್ಳೆಂದು ತೋರಿಸಿ, ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

-ಆದಿತ್ಯ ಮಯ್ಯ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್. ಡಿ. ಎಮ್. ಕಾಲೇಜು , ಉಜಿರೆ

Prev Post

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

Next Post

ಗುರು | ಪೂರ್ಣಿಮಾ

post-bars

Leave a Comment

Related post