Back To Top

 ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು ಎನ್ನುತ್ತಾರೆ ಕಲಾನ್ವಿತ ಜೈನ್ ಕೆರ್ವಾಶೆ. ಅವರು ಲೇಖಕ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಕೃತಿಯ ಕುರಿತು ಬರೆದ ವಿಮರ್ಶೆ .

ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳು ಹಿಂದೆ ನಡೆದ ಘಟನೆಗಳನ್ನು ಆರಿಸಿ ಕಾದಂಬರಿಕಾರ ಅದಕ್ಕೆ ಆಕಾರವನ್ನು ನೀಡುತ್ತಾನೆ.ಇಂತಹ ಮಹತ್ವದ ಐತಿಹಾಸಿಕ ಕಾದಂಬರಿಗಳಲ್ಲಿ ಚೆನ್ನಭೈರಾದೇವಿ ಪುಸ್ತಕವು ಒಂದು.
ಗಜಾನನ ಶರ್ಮಾರ ಇತ್ತೀಚಿನ ಕಾದಂಬರಿ ಚೆನ್ನಭೈರಾದೇವಿ. ಈ ಪುಸ್ತಕ ನನಗೆ ಆತ್ಮೀಯ ವೆನಿಸಲು ಹಲವು ಕಾರಣಗಳಿವೆ. ಅದರಲ್ಲೂ ಅವರು ಆಯ್ಕೆ ಮಾಡಿಕೊಂಡಿರುವ ಪಾತ್ರ, ನಿರೂಪಣಾ ಶೈಲಿ, ಭಾಷೆ, ಹೀಗೆ ಹಲವಾರು ಅಂಶಗಳು ಕಾದಂಬರಿ ಗರಿಷ್ಠ ಮಟ್ಟಕ್ಕೆ ಬೆಳೆಯಲು ಸಹಾಯವಾಗಿದೆ.

ಕರಾವಳಿ ಭಾಗ ಹಾಗೂ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ 54 ವರ್ಷಗಳಲ್ಲಿ ಸಮರ್ಥವಾಗಿ ಆಳ್ವಿಕೆ ಮಾಡಿ ಪೋರ್ಚುಗೀಸರಿಂದಲೇ ಕಾಳು ಮೆಣಸಿನ ರಾಣಿ ಎಂದೇ ಖ್ಯಾತಳಾಗಿದ್ದಾಳೆ. ಗೇರುಸೊಪ್ಪೆಯ ಜನರಿಗೆ ಸಣ್ಣಮ್ಮ ಎಂದೇ ಹೆಸರುವಾಸಿಯಾಗಿದ್ದಳು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಅವರಿಗೆ ಶಸ್ತ್ರಸ್ತ್ರ ವಿಧ್ಯೆಯನ್ನು ಕಲಿಸಿ ಕೊಡುತ್ತಿದ್ದಳು. ಆದರೂ ಅಷ್ಟು ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದ್ದರು ಒಂದೂ ದಿನಾನೂ ರಾಣಿಯಾಗಿ ಅಹಂಕಾರದಿಂದ ಮೆರೆದವಳಲ್ಲ.

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು. ಸಾಲ್ಲೇಖನ ವೃತ, ಶವ ಸಂಸ್ಕಾರ ವಿಧಿ ವಿಧಾನ, ಹೀಗೆ ಹಲವು  ಸನ್ನಿವೇಶವು ಅನವಶ್ಯಕ ಎಂದು ಓದುಗನಿಗೆ ಅನ್ನಿಸುವುದಿಲ್ಲ.

ಅದರಲ್ಲೂ ಚೆನ್ನಾಬೈರಾದೇವಿಯ ಪಟ್ಟಾಭಿಷೇಕ ಸಂಧರ್ಭವನ್ನು ಗಜಾನನ ಶರ್ಮಾ ಅವರು ಸುಂದರವಾಗಿ ಚಿತ್ರಸಿದ್ದಾರೆ. ಈ ಪುಸ್ತಕದಲ್ಲಿ ಎಷ್ಟೋ ಜನರಿಗೆ ತಿಳಿಯದ ದಂತ ಕಥೆಗಳಿವೆ. ಸುಮಾರು 427 ಪುಟಗಳ ಪುಸ್ತಕ ಇದಾಗಿದೆ. ಹೀಗೆ ಎಳೆಮರೆಕಾಯಿಯಂತಿದ್ದ ಚೆನ್ನಾಬೈರಾದೇವಿಯ ಇತಿಹಾಸವೂ ಹಚ್ಚ ಹಸಿರಾಗಲಿ.

ಕಲಾನ್ವಿತ ಜೈನ್ ಕೆರ್ವಾಶೆ
ಎಸ್. ಡಿ. ಎಂ ಕಾಲೇಜು
ಉಜಿರೆ

Prev Post

ಅಮ್ಮನ ಗೆಜ್ಜೆ | ಶಿಲ್ಪ ಬಿ

Next Post

Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

post-bars

Leave a Comment

Related post