ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ
ಪುಸ್ತಕ :- ರೌದ್ರಾವರಣಂ
ಲೇಖಕ :- ಅನಂತ ಕುಣಿಗಲ್
ಪ್ರಕಾಶನ :- ಅವ್ವ ಪುಸ್ತಕಾಲಯ
ಹಳ್ಳಿಗಾಡಿನ ಒಬ್ಬಂಟಿ ವ್ಯಕ್ತಿಯೊಬ್ಬನ ಜೀವನದ ಸುತ್ತ ಸಾಗುತ್ತಾ, ಮನುಷ್ಯನ ಭಾವನೆಗಳ ಜೊತೆ ನಮ್ಮ ನಡುವೆ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳಿಗೆ ಲೇಖಕನ ಒಳದೃಷ್ಟಿ ಕೊಟ್ಟು ಚಿತ್ರಿಸಿರುವ ರೌದ್ರಾವರಣಂ, ಲೇಖಕ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿ.
ಹಳ್ಳಿಯ ಕೆಳಜಾತಿ ವ್ಯಕ್ತಿಯೊಬ್ಬನ ಜೀವನವು ಸಿನಿಮಿಯಾ ರೀತಿಯಲ್ಲಿ ಈ ಕಾದಂಬರಿ ಪೂರ್ತಿ ಸುತ್ತುತ್ತದೆ. ಮಲೆನಾಡಿನ ಬೇಟೆಯ ಸೊಬಗನ್ನು ಕಾದಂಬರಿ, ಕಥೆಗಳಲ್ಲಿ ಓದುತ್ತಿದ್ದ ಓದುಗರಿಗೆ ಬಯಲುಸೀಮೆ ಕಾಡುಗಳ ಶಿಕಾರಿಯ ಭಯಾನಕ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಮ್ಮಾರ ಬಾಬಣ್ಣ, ಆತನ ನಾಯಿ ಚಂದ್ರ, ಅನಾಥ ಮಗು ಅಗಸ್ತ್ಯ, ವಿಷಕಂಠ ಐನೋರಿನ ದುಷ್ಟಚಟಗಳ ಮೂಲಕ ಸಮಾಜದ ಹಲವಾರು ಮುಖಗಳನ್ನು ತೆರೆದಿಡಲಾಗಿದೆ. ಬಾಬಣ್ಣನ ಮೂಲಕ ಸಮಾಜದ ಹಲವಾರು ಕಟ್ಟುಪಾಡುಗಳನ್ನು, ಮನುಷ್ಯ ಸಹಜ ಭಾವನೆಗಳನ್ನು ಕಟ್ಟಿಕೊಡುತ್ತದೆ. ನಾಯಿಯೊಂದಿಗಿನ ಮನುಷ್ಯ ಸಂಬಂಧ, ಪ್ರಾಣಿಗಳಿಗೆ ಒಡೆಯನ ಮೇಲೆ ಇರುವ ಅಕ್ಕರೆ, ಕಾಳಜಿಯ ಎಳೆ ಪೂರ್ತಿ ಕಾದಂಬರಿಯಲ್ಲಿ ತರೆದುಕೊಂಡಿದೆ. ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ , ಒಂದು ದೊಡ್ಡ ಕಥೆಯ ರೀತಿಯಲ್ಲಿ ಸಾಗುವ ರೌದ್ರಾವರಣಂ ಕಾದಂಬರಿ ಕೊನೆಯವರೆಗೂ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಇಷ್ಟವಾದ ಸಾಲು –
ನಾವು ಯಾರನ್ನು ತುಂಬಾ ಹಚ್ಚಿಕೊಂಡಿರುತ್ತೇವೋ ಅಂತವರು ನಮ್ಮ ಜೊತೆ ಹೆಚ್ಚು ಕಾಲ ಉಳಿಯುವುದಿಲ್ಲ.
ನಿತಿನ್ ಹೆಚ್. ಸಿ
ಪ್ರಥಮ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
One thought on “ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ”
Good, keep it up