ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ
ಕರ್ವಾಲೋ ಮಲೆನಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ರೋಚಕ ಘಟನೆ. ಹಳ್ಳಿಯ ಗಮಾರ ಮಂದಣ್ಣ, ಎಂಗ್ಟ, ಕರಿಯಪ್ಪ, ಪ್ರಭಾಕರ, ಕರ್ವಾಲೋ ಜೊತೆಗೆ ಕಿವಿ ಓದುಗರಿಗೆ ಹತ್ತಿರವಾಗುವ ಪಾತ್ರಗಳು. ಕೊನೆಯಲ್ಲಿ ಬರುವ ಹಾರುವ ಓತಿ ಮುಖ್ಯ ಪಾತ್ರವಾಗಿದ್ದರೂ ಜಡಿ ಮಳೆಯ ಮಲೆನಾಡು, ಮಲೆನಾಡಿನ ಕಾಡು, ಕಾಡಿನ ಜೇನು, ಈಚಲು ಮುಳ್ಳಿನ ಪಯಣ, ಚರ್ಮ ಸುಲಿದ ಹಾವು ಎಲ್ಲವೂ ಹಾರುವ ಓತಿಯವರೆಗೆ ಓದಿಸಿಕೊಂಡು ಹೋಗುತ್ತವೆ.
ಕರ್ವಾಲೋ ಎಂಬ ಜೀವ ವಿಜ್ಞಾನಿಯ ಸುತ್ತ ತಿರುಗುವ ರೋಚಕ ಕಥೆ ಒಂದಷ್ಟು ವಿಶಿಷ್ಟ ಕಾರಣಗಳಿಂದ ವಿಭಿನ್ನ ಕೃತಿ. ಕಾದಂಬರಿಯ ಪ್ರತಿ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ತೇಜಸ್ವಿಯವರು ಎಂದಿನಂತೆ ಯಶಸ್ವಿಯಾಗಿದ್ದಾರೆ. ಮರೆಯಲಾಗದ ತೇಜಸ್ವಿಯವರ ಕಾದಂಬರಿಗಳ ಸಾಲಿನಲ್ಲಿ ಕರ್ವಾಲೋ ಮುಂಚೂಣಿಯಲ್ಲಿರುತ್ತದೆ ಎನ್ನಬಹುದು.
ನೈದಿಲೆ ಶೇಷೆಗೌಡ
ಎಸ್.ಡಿ.ಎಂ. ಕಾಲೇಜು, ಉಜಿರೆ