ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ
ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ: ಸಿನಿಮಾ ವಿಮರ್ಶೆ
-ಅನುರಾಗ್ ಗೌಡ
ಆ ದಿನ ರಾತ್ರಿ ಆ ನಗರದಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ. ಪೊಲೀಸ್ ಆಫೀಸರ್ ಹರೀಶ್ ಮಾಧವ್ ( ಸುರೇಶ್ ಗೋಪಿ) ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದಿಷ್ಟು ರೋಮಾಂಚನಕ್ಕೂ ಆಸ್ಪದವಿಲ್ಲದಂತೆಯೇ ಪೂರಕ ಸಾಕ್ಷಾಧಾರಗಳೊಂದಿಗೆ ಪ್ರೊಫೆಸರ್ ನಿಶಾಂತ್ (ಬಿಜು ಮೆನನ್) ಅನ್ನು ಈ ಪ್ರಕರಣದ ಆರೋಪಿ ಎಂದು ಕೇಸ್ ಅನ್ನು ಸಾಲ್ವ್ ಮಾಡಿ ನಿವೃತ್ತ ಜೀವನಕ್ಕೆ ತೆರಳುತ್ತಾರೆ.
ಆದರೆ ಈ ಪ್ರಕರಣದಲ್ಲಿ ಧೋಷಿಯಾಗಿದ್ದ ನಿಶಾಂತ್ ಏಳು ವರ್ಷಗಳ ಶಿಕ್ಷೆ ಅನುಭವಿಸಿ ಹೊರ ಬರುತ್ತಾನೆ. ಕುಟುಂಬ ಮತ್ತು ಸಮಾಜದಲ್ಲಿ ಬಹಿಷ್ಕೃತಗೊಂಡಿದ್ದ ನಿಶಾಂತ್‌ನು ಸೇಡು ತೀರಿಸಿಕೊಳ್ಳುತ್ತಾನೋ ಅಥವಾ ಒಬ್ಬ ಅತ್ಯಾಚಾರಿಯು ಶಿಕ್ಷಾ ಅವಧಿ ಮುಗಿದ ನಂತರ ಸಮಾಜ ಅವನನ್ನು ಹೇಗೆ ಕಾಣಬಹುದು ಎಂಬ ರೀತಿಯಲ್ಲೋ ಕಥೆ ಸಾಗಬಹುದೋ ಎಂಬಂತೆ ನಾವು ನೋಡುತ್ತಿರುವಾಗಲೇ ಅವನು ನ್ಯಾಯಾಲಯದ ಮೆಟ್ಟಿಲೇರುತ್ತಾನೆ.
“ತಾನು ಮಾಡದ ತಪ್ಪಿಗೆ ತಾನು ಶಿಕ್ಷೆ ಅನುಭವಿಸಿದ್ದೇನೆ. ಇದಕ್ಕೆಲ್ಲಾ ಸರಿಯಾಗಿ ತನಿಖೆ ಮಾಡದ ಇನ್ವೆಸ್ಟಿಗೇಷನ್ ಆಫಿಸರ್ ಹರೀಶ್ ಮಾಧವ್ ರೇ ಕಾರಣ” ಎಂದು ಮಾನನಷ್ಟ ಮೊಕದ್ದಮೆ ಹೂಡುತ್ತಾನೆ…!!!
ಹಾಗಾದರೆ ಕೋರ್ಟ್ ಏನು ತೀರ್ಪು ನೀಡಬಹುದು ? ನಿಜವಾದ ಅತ್ಯಾಚಾರಿ ಯಾರು ? ಸುರೇಶ್ ಗೋಪಿ ತನಿಖೆಯಲ್ಲಿ ಎಡವಿದರೇ ಅಥವಾ ಎಡವಿದ್ದೆಲ್ಲಿ ? ಸುರೇಶ್ ಗೋಪಿ ಮತ್ತು ನಿಶಾಂತ್ ಅವರ ಜೀವನ ಕೋರ್ಟ್ ತೀರ್ಪಿನ ನಂತರ ಏನೆಲ್ಲಾ ಏಳು ಬೀಳುಗಳಿಗೆ ಒಳಗಾಗುತ್ತೆ ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಲಯಾಳಂ ನ ಹಿರಿಯ ನಟ ಸುರೇಶ್ ಗೋಪಿ ಮತ್ತು ಬಿಜು ಮೆನನ್ ಅಭಿನಯದ ‘ ಗರುಡನ್ ಚಿತ್ರದಲ್ಲಿದೆ.
ಒಂದು ಪಕ್ಷ ಚಿತ್ರಕಥೆಯಲ್ಲಿ ವಿಭಿನ್ನತೆ ಇದ್ದಿದ್ದರೆ ಪ್ರೇಕ್ಷಕರಿಗೆ ಇನ್ನೂ ಹೆಚ್ಚಿನ ರೋಮಾಂಚಕತೆಗೆ ಅವಕಾಶ ದೊರೆಯುತ್ತಿತ್ತು ಹಾಗೂ ಕ್ಲೈಮಾಕ್ಸ್ ನಲ್ಲಿ ಸ್ವಲ್ಪ ಜಾಸ್ತೀನೇ ಟ್ವಿಸ್ಟ್ ಫ್ಯಾಕ್ಟರ್ಸ್ ಗಳನ್ನು ಹೇಳಲು ಪ್ರಯತ್ನಿಸುವುದು ಈ ಚಿತ್ರದಲ್ಲಿ ನನಗೆ ಕಂಡ ನೆಗಟಿವ್ ಅಂಶ…! ಉಳಿದಂತೆ ಸುರೇಶ್ ಗೋಪಿ ಮತ್ತು ಬಿಜು ಮೆನನ್ ನಟನೆಗೂ ಫುಲ್ ಮಾರ್ಕ್ಸ್. ಚೊಚ್ಚಲ ನಿರ್ದೇಶನದಲ್ಲೇ ಅತ್ಯುತ್ತಮ ಸಿನಿಮಾ ನೀಡಿದ ನಿರ್ದೇಶಕ ಅರುಣ್ ವರ್ಮಾ ಕೂಡ ಅಭಿನಂದನಾರ್ಹರು..!! ಜ್ಯಾಜೆಸ್ ಬಿಜೋಯ್ ಅವರ ಬಿಜಿಎಮ್ ಕೂಡ ಈ ಚಿತ್ರದ ಕಥೆಗೆ ಇನ್ನೂ ಹೆಚ್ಚಿನ ತೀಕ್ಷ್ಣತೆ ನೀಡುವಲ್ಲಿ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಈ ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾವನ್ನು ನೀವು ‘ನೋಡಲೇ ಬೇಕಾದ ಬೆಸ್ಟ್ ಮೂವಿ ಲೀಸ್ಟ್’ ಗೆ ಸೇರಿಸಿಕೊಳ್ಳಬಹುದು…!!!
– ಅನುರಾಗ್ ಗೌಡ
ದ್ವಿತೀಯ ಪತ್ರಿಕೋದ್ಯಮ (ಸ್ನಾತಕೋತ್ತರ ವಿಭಾಗ)
ಎಸ್‌ಡಿಎಂಸಿ ಉಜಿರೆ