Back To Top

 ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ಹೊನ್ನಾವರದಿಂದ 13ಕಿಲೋ ಮೀಟರ್‌ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು ನಂಬುತ್ತಾರೆ. ಪ್ರತಿನಿತ್ಯ ದೇವಿಗೆ ಮಹಾಪೂಜೆ ಆಗುತ್ತದೆ.

ನಾನು ನನ್ನ ಸ್ನೇಹಿತರೊಂದಿಗೆ ನಮ್ಮ ಊರಿನಿಂದ 75ಕಿ.ಮೀ. ದೂರದಲ್ಲಿರುವ ಈ ದೇವಾಲಯಕ್ಕೆ ಹೋಗಿದ್ದನು. ಸುಂದರವಾದ ಪ್ರಕೃತಿಯನ್ನು ನೋಡಿ ಮೈ ಮರೆತೆವು. ದಟ್ಟ ಕಾಡಿನಲ್ಲಿ ನಾವು ಕಾರ್‌ನಲ್ಲಿ ಹೋಗುವಾಗ ನವಿಲು, ನರಿ ರಸ್ತೆ ದಾಟುವ ಹಾವುಗಳು ಸಿಕ್ಕವು ಅದೊಂದು ಸುಂದರ ಅನುಭವವಾಯಿತು. ನಾನು ಚಿಕ್ಕವನಿದ್ದಾಗಲೊಮ್ಮೆ ಈ ದೇವಾಲಯಕ್ಕೆ ಬಂದಿದ್ದೆ, ಆದರೆ ದೇವಾಲಯದ ಬಗ್ಗೆ ತಿಳಿದುಕೊಳ್ಳುವ ಜ್ಞಾನ ಆಗ ಇರಲಿಲ್ಲ. ಈಗ ಆ ದೇವಾಲಯದ ಶಕ್ತಿಯ ಬಗ್ಗೆ ಅರಿದುಕೊಳ್ಳುವ ಜ್ಞಾನ ಇರುವುದರಿಂದ ಮನಸ್ಸಿನಲ್ಲಿ ಭಕ್ತಿ ಅಪಾರವಾಗಿ ಇತ್ತು.

ನಾವೆಲ್ಲರೂ ದೇವಾಲಯದಲ್ಲಿ ನಿಂತು ಒಮ್ಮೆ ಸುತ್ತಲೂ ನೋಡಿದಾಗ ಬೆಟ್ಟಗುಡ್ಡ ಪ್ರಕೃತಿಯನ್ನು ನೋಡಿ ನಮ್ಮನ್ನ ನಾವೇ ಮರೆಯುವ ಸೌಂದರ್ಯ ಆ ಪ್ರದೇಶದಲ್ಲಿದೆ. ನಂತರ ಶ್ರದ್ಧೆಯಿಂದ ಗರ್ಭಗುಡಿಯೊಳಗೆ ದೇವಿಯ ದರ್ಶನ ಮಾಡಿದೆವು ನಂತರ ಗರ್ಭಗುಡಿಯಿಂದ ಹೊರಗೆ ಬಂದೆವು ದೇವಾಲಯದ ಸಮೀಪದಲ್ಲಿ ನೀರಿನ ಕೊಳವಿದ್ದು ಬೇಸಿಗೆಯಲ್ಲಿಯೂ ನೀರಿಗೆ ಕೊರತೆ ಯಾಗುವುದಿಲ್ಲ ಸೈಯಾದ್ರಿ ಪರ್ವತಗಳಿಂದ ನೀರು ಉತ್ಪವಿಸುತ್ತದೆ ಎಂದು ನಂಬುತ್ತಾರೆ. ಈ ನೀರಿನಲ್ಲಿ ಔಷಧಿಯ ಗುಣವೂ ಇದೆ.

ಕಾರ್ತಿಕ್ ಪೈ
ಪ್ರಥಮ ಎಂ.ಸಿ.ಜೆ. ವಿದ್ಯಾರ್ಥಿ
ಎಸ್‌.ಡಿ.ಎಮ್‌. ಕಾಲೇಜು, ಉಜಿರೆ.

Prev Post

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

Next Post

ನೆರಳು | ಶಿಲ್ಪ. ಬಿ

post-bars

Leave a Comment

Related post