ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್
ಪುಸ್ತಕ :- ಪ್ಯಾರಸೈಟ್
ಲೇಖಕ :- ಕಾರ್ತಿಕಾದಿತ್ಯ ಬೆಳ್ಗೋಡು
ಅಭಿವೃದ್ಧಿ ಹೆಸರಿನಲ್ಲಿ ಬದಲಾಗುತ್ತಿರುವ ಮಲೆನಾಡಿನ ಜೀವನ ಶೈಲಿ, ವಿನಾಶದ ಅಂಚಿಗೆ ಬಂದು ತಲುಪಿರುವ ಪರಿಸರ. ಆಧುನಿಕ ಮಾತ್ರೆಗಳ ನಡುವೆ ನಾವು ಮರೆತಿರುವ ಮನೆ ಮದ್ದು, ಮಲೆನಾಡಿನ ಪರಿಸರ ನಾಶದ ವಿಷಾದ. ಹಾಗೆಯೇ ಕಾಡಿನೊಳಗೆ ದಾಟು ಬಳ್ಳಿಯನ್ನು ಹುಡುಕುತ್ತಾ ಸಾಗುವ ಕಥೆಯ ಮೂಲಕ ಯುವ ಲೇಖಕ ಕಾರ್ತಿಕಾದಿತ್ಯ ಬೆಳ್ಗೋಡು ಅವರ ಮೊದಲ ಕಾದಂಬರಿ ಪ್ಯಾರಸೈಟ್ ತೆರೆದಿಡುತ್ತದೆ.
ಕಾಡಿನಲ್ಲಿ ನಿಗೂಢವಾದ ದಾಟು ಬಳ್ಳಿಯನ್ನು ದಾಟಿದರೆ ಅವರು ಸಾಗುವ ದಾರಿಯನ್ನು ಮರೆತು ಹೋಗುತ್ತಾರೆ. ಈ ದಾಟು ಬಳ್ಳಿಯನ್ನು ಕಾಡಿನಲ್ಲಿ ಹುಡುಕುವ ನೆಪದಲ್ಲಿ ಮನುಷ್ಯ ನಿಸರ್ಗದ ಮೇಲೆ ಮಾಡುತ್ತಿರುವ ಕೌರ್ಯ, ರೈತರ ಅಸಹಾಯಕತೆ, ಶಿಕಾರಿ ಮಾಡುವವರ ವಿಕೃತ ತೆವಲುಗಳು ಹೇಗೆ ಜೀವ ಸಂಕುಲದ ಕೊಂಡಿಯನ್ನು ನಾಶ ಮಾಡುತ್ತಿವೆ ಎಂಬುದನ್ನು ಚಿತ್ರಿಸುತ್ತಾ ಸಾಗುತ್ತಾರೆ. ಮಲೆನಾಡಿನ ಭೂತದ ಕತೆಗಳ ರಹಸ್ಯ, ಪ್ರಕೃತಿಯನ್ನೇ ದೇವರೆಂದು ನಂಬುವ ದೈವ ಪೂಜೆಯ ಹಿಂದಿನ ಕರಾಮತ್ತುಗಳ ಜೊತೆಯಲ್ಲಿ ಮಲೆನಾಡಿನ ಜನರ ಬದುಕಿನ ವಿವಿಧ ಮಜಲುಗಳನ್ನು ತೆರೆದಿಟ್ಟಿದ್ದಾರೆ. ತೇಜಸ್ವಿಯವರ ಬರವಣಿಗೆ ಶೈಲಿಯಲ್ಲಿ ಬರೆದಿರುವ ಈ ಕಾದಂಬರಿಯಲ್ಲಿ ಮಲೆನಾಡಿನ ಹಲವು ಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ಮಯೂರ್ ಕಾಮತ್
ಪ್ರಥಮ ಸ್ನಾತಕೋತ್ತರ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಕಾಲೇಜು, ಉಜಿರೆ