Back To Top

 ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅದರಲ್ಲಿಯೂ ಆ ಬೆಕ್ಕು, ನಾಯಿ, ಹಸು ಪಂಚಪ್ರಾಣ. ಅದರೊಂದಿಗೂ ಚಿಕ್ಕ ವಯಸ್ಸಿನಿಂದಲೂ ಆಸೆ ಅಂದ್ರೆ, ಚಿರತೆ, ಹುಲಿ ಇನ್ನು ಸಾಕಬೇಕಂತ . ಮೊದಲಿನಿಂದಲೂ ಟಿವಿಗಳ ಮೂಲಕ ಹುಲಿಗಳ ಕಥೆಗಳನ್ನು ನೋಡುತ್ತಾ ಅದನ್ನು ಇಷ್ಟ ಪಟ್ಟವಳು ನಾನು.

ಹಾಗೆಯೇ ಒಂದು ಪುಸ್ತಕ ಓದಬೇಕು ಅಂತ ಹೇಳಿ ಲೈಬ್ರೆರಿಯಲ್ಲಿ ಪುಸ್ತಕ ಹುಡುಕುತ್ತಿರುವಾಗ ನನ್ನ ಕಣ್ಣೆದುರಿಗೆ ಸಿಕ್ಕಿದ್ದು ಹುಲಿಯ ಚಿತ್ರ, ಅದರ ಶೀರ್ಷಿಕೆ ನೋಡುವಾಗ ಏನೂ ಕಾತುರವೆನಿಸಿತು, ಅದರಂತೆ ಆ ಪುಸ್ತಕದ ಶೀರ್ಷಿಕೆ ರುದ್ರ ಪ್ರಯಾಗದ ಭಯಾನಕ ನರಭಕ್ಷಕ ಹೆಸರು ಕೇಳುವಾಗಲೇ ಮನಸ್ಸಿನಲ್ಲಿ ಏನು ಭಯ ಹುಟ್ಟಿಸುವಂತಿತ್ತು. ಹುಲಿ ಚಿರತೆಗಳು ಪ್ರಾಣಿಗಳನ್ನು ಕೊಂದು ತಿನ್ನುತ್ತವೆ ಎನ್ನುವುದು ನಾವು ಕೇಳಿರುತ್ತೇವೆ ಅದರಂತೆ ಈ ಶೀರ್ಷಿಕೆಯಲ್ಲಿ ನರಭಕ್ಷಕ ಎಂದಾಗ ಯಾಕಿರಬಹುದು ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು..

ಈ ಪುಸ್ತಕವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಜಿಮ್ ಕಾರ್ಬೆಟ್ರವರ ಕೃತಿ ಸಂಗ್ರಹಾನುವದದಿಂದ ರುದ್ರಪ್ರಯಾಗದಲ್ಲಿ ಆಗುತ್ತಿರುವಂತಹ ಹೀನಾಯಕ ನರಬಲಿಯನ್ನು ಕುರಿತು ಪುಸ್ತಕ ಬರೆದಿದ್ದಾರೆ.

ಪುಸ್ತಕ ಓದುತ್ತ ಕೂತಾಗ ಕೇದಾರನಾಥ ಕ್ಷೇತ್ರಕ್ಕೆ ಹೋಗುವ ದಾರಿಯಾದ ರುದ್ರ ಪ್ರಯಾಗದ ದಟ್ಟವಾದ ಕಾಡಾಗಿರುವುದರಿಂದ ಹಲವಾರು ರೀತಿಯ ಪ್ರಾಣಿಗಳು ಇದ್ದವು ಅದರಂತೆ ಹುಲಿ, ಚಿರತೆಗಳು ಇತರೆ ಪ್ರಾಣಿಗಳನ್ನು ತಿಂದು ಬದುಕುತ್ತಿದ್ದವು. ಹೀಗೆ ಹಲವು ದಿವಸಗಳ ನಂತರ ಹುಲಿ ಚಿರತೆಗಳಿಗೆ ಆಹಾರಕ್ಕೆ ಸಿಗದ ಕಾರಣ ಚಿರತೆಗಳು ತಮ್ಮ ಆಹಾರಕ್ಕಾಗಿ ಕೇದಾರನಾಥಕ್ಕೆ ಹೋಗುವಂತ ಯಾತ್ರಾದಿಗಳನ್ನು ಕೊಂದು ತಿನ್ನಲು ಪ್ರಾರಂಭಿಸಿತು.

ಇದನ್ನು ಓದುತ್ತಾ ಇರುವಾಗ ನಾವು ಜಿಮ್ ಕಾರ್ಬೇಟ್‌ ಅವರೊಂದಿಗೆ ಸಾಗುತ್ತಿದ್ದೇವೆ ಎನ್ನುವಂತ ಅನುಭವ ಉಂಟಾಗುತ್ತದೆ. ಹಾಗೇ ಮುಂದಕ್ಕೆ ನರಬಲಿಗಳು ಹೆಚ್ಚಾಗುತ್ತಾ ಹೋದವು. ಅದರಲ್ಲೂ ವಿಸ್ಮಯವಾಗುವಂತಹ ನರಬಲಿ ಎಂದರೆ, ಅಜ್ಜಿಯ ಸಾವು- ಬದುಕಿನ ಹೋರಾಟ.

ಕಥೆಯನ್ನು ಓದುವಾಗ ಅದು ಚಿರತೆ ಅಲ್ಲ ಯಾವುದೋ ಪಿಶಾಚಿ ಎಂದು ಮನದಲ್ಲಿಯಾದರು ಬರುವುದು ಸತ್ಯ. ಹಾಗೆಯೇ ಘರ್ವಾಲ್ ಜನರ ಮನದಲ್ಲಿ ಮೂಡಿಬಂದಿರುವುದು. ಅದರ ಬುದ್ಧಿ, ಚಾಣಕ್ಯತೆ ಕಂಡಾಗ ಮೈ ಬೆರಗುವಾಂತಾಗುತ್ತದೆ.

ಕಾರ್ಬೇಟ್ ಅವರು ನರಭಕ್ಷಕ ಚಿರತೆಯನ್ನು ಹುಡುಕುವಲ್ಲಿ ನಿರತರಾಗಿದ್ದರು. ಆದರೆ ನರಭಕ್ಷಕನ ಸುಳಿವೆ ಇರಲಿಲ್ಲ. ಕಥೆಯನ್ನು ಓದುವಾಗಲೂ ನರಭಕ್ಷಕ ಈಗ ಸಿಕ್ಕಿತು ಎನ್ನವ ಭಾವ ಉಂಟಾಗುತ್ತದೆ. ನರಭಕ್ಷಕನ ಅದೃಷ್ಟವೂ ಕಾರ್ಬೇಟ್ ಅವರ ದುರದೃಷ್ಟವೂ ಎಂಟು ವರ್ಷಗಳ ನರಭಕ್ಷಕ ಸಾವಿರಾರು ನರ ಬಲಿಯನ್ನು ಪಡೆದುಕೊಂಡಿತ್ತು.

ಎಂಟು ವರ್ಷಗಳ ಪರ್ಯಾಂತ ರುದ್ರ ಪ್ರಯಾಣದ ಆಜು ಬಾಜಿನ 500 ಚದರ ಮೈಲಿ ಪ್ರದೇಶದಲ್ಲಿ ನಿರಂತರವಾಗಿ ನೂರಾರು ಕಗ್ಗೊಲೆಗಳನ್ನು ಮಾಡಿದ ಈ ಚಿರತೆಯ ಕುಯುಕ್ತಿ, ಚಾಣಾಕ್ಷತೆ ಮನುಷ್ಯರ ನಡುವಳಿಕೆಯ ತಿಳುವಳಿಕೆಗಳು ಅದನ್ನು ಈ ಕಥೆಯ ಸಾಮಾನ್ಯ ಖಳನಾಯಕನಾಗಿ ರೂಪಿಸಿವೆ. ಸರ್ಕಾರದಿಂದ ಹಿಡಿದು ಸಾರ್ವಜನಿಕರವರೆಗೆ ಎಲ್ಲರೂ ಇದು ಪ್ರಾಣಿ ಅಲ್ಲವೆಂದು ಅದು ಯಾವುದೋ ಪಿಶಾಚಿಯೇ ಇರಬೇಕು ಎಂದು ಯೋಚನೆ ಬೆಳೆಯುತ್ತದೆ.

ಊರಿನವರಲ್ಲಿ ಯಾರು ಇರುತ್ತೇವೋ ಯಾರು ಇರುವುದಿಲ್ಲವೋ ಯಾವಾಗ ನರಭಕ್ಷಕನಿಗೆ ಆಹುತಿಗುತ್ತೇವೆಯೋ ಭಯ ಸೃಷ್ಠಿಯಾಗುತ್ತದೆ. ಸಂದರ್ಭದಲ್ಲಿ ಜೀನ್ ಕಾರ್ಬೇಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೇಟ್‌ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಮುಗ್ಧ ರೈತರು ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.

ರುದ್ರ ಪ್ರಯಾಗದ ನರಭಕ್ಷಕ ಮೈನವಿರಾಗಿಸುವಂತಹ ಸತ್ಯ ಕಲಾಕೃತಿಯಾಗಿದೆ. ಇದನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆಗೆ ಮುಳುಗುವಾಗದಂತೆ ಅನುವಾದಿಸಿದ್ದಾರೆ.

ನಮಿತಾ ಸಾಲಿಯಾನ್
ಎಸ್.ಡಿ.ಎಮ್. ಕಾಲೇಜು, ಉಜಿರೆ

Prev Post

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

Next Post

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

post-bars

Leave a Comment

Related post