ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ
ಈ ಜಗವ ಕಣ್ಣ್ತೆರೆದು ನೋಡಲು
ನನ್ನ ಗರ್ಭಕೋಶದೊಳಗೆ
ಪರಿತಪಿಸುತಿತ್ತು ಆ ನಿನ್ನ ಕಣ್ಣುಗಳು
ಅಂತೂ ಇಂತೂ ಉರುಳಿತು
ಆ ಒಂಬತ್ತು ತಿಂಗಳು
ಮನಕೆ ನಿನ್ನ ನೋಡುವ ಬಯಕೆ
ಕತ್ತಲ ಜಗದಿ ಹೊರ ಬಂದೆ
ಅಂದೇ ಒಡಲಿಗೆ ತಂದೇ ಬೆಳಕೆ
ಕರುಳ ಕುಡಿಯೆ ನನ್ನ ದಿನಚರಿಯಲಿ
ನೀನು ಸೇರಿ ಬಿಟ್ಟೆ
ಎದೆಯ ಹಾಲು ಕುಡಿಸಿ
ಮಮತೆಯ ತುತ್ತನ್ನ ಇಟ್ಟೆ
ಅಷ್ಟೇ, ಮತ್ತೆಲವು ನಿನ್ನದೇ
ಮನದಿ ಭರವಸೆಯ ನಗುವ
ತರಿಸಿ ಬಿಟ್ಟೆ
ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ?
ಅಚಲ್ ವಿಟ್ಲ
ಪ್ರಥಮ ಎಮ್.ಸಿ.ಜೆ.
ಎಸ್.ಡಿ.ಎಂ. ಕಾಲೇಜು, ಉಜಿರೆ