ಓ.. ಓ.. ಪ್ರಿಯತಮ | ರಕ್ಷಿತಾ ಜೈನ್
ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿನಿ ರಕ್ಷಿತಾ ಜೈನ ಬರೆದ ಪ್ರೇಮದ ಪತ್ರ..
ಓ.. ಓ.. ಪ್ರಿಯತಮ…
ಬರವಣಿಗೆಯ ಕನಸುಗಾರಿಕೆ ನನ್ನದು. ಪ್ರತಿ ಅಕ್ಷರವು ನನ್ನಾಣೆ ನಿನ್ನನ್ನೇ ಬಯಸುತಿಹುದು. ಪ್ರೀತಿಯಲ್ಲೂ ಇಷ್ಟೊಂದು ಪ್ರೇಮ ತುಂಬಿಸಿ ಎಂದಿಗೂ ನನ್ನೀ ಮುಖಕಮಲದಿ ನೀ ನಗುವ ಚೆಲ್ಲುತ್ತಿರುವೆ.. ಹೇಳಲು ಪದಗಳ ಮಾಲೆ ಸಾಲದಿರಲು ಆದರೂ ಮನಸ್ಸು ಹೇಳಿಯೇ ಬಿಡು ನಿನ್ನ ಮಾತುಗಳ ಎಂದು ಒತ್ತಾಯಿಸುವುದು . ನೀ ಮೌನಿಯಾದರು ಪ್ರೀತಿಯಲ್ಲೇ ಎಲ್ಲ ತಿಳಿಸುವೆ ನನ್ನನ್ನು ಎಷ್ಟೊಂದುಪ್ರೀತಿಸುತ್ತಿರುವೆ ಎಂಬುವುದನ್ನು . ಅದೇನೆ ಆಗಲಿ ನೀ ನನಗಾಗಿ ಅದೆಷ್ಟು ನಿನ್ನ ಸಮಯ ಮೀಸಲಿಡುವೆ ಗೆಳಯ. ಪ್ರೀತಿಯಲ್ಲಿ ಇಷ್ಟೊಂದು ಮಾಯೆ ಇದೆಯೆಂದು ತಿಳಿದೇ ಇರಲಿಲ್ಲ.ತಿಳಿಸಿ ಬಿಟ್ಟೆ ಎಲ್ಲ ನನಗೆ. ನಾ ನಿನ್ನ ಇಷ್ಟ ಪಟ್ಟಿರುದರಲ್ಲಿ ಯಾವುದೆ ಅನುಮಾನವಿಲ್ಲ ನಿನ್ನ ಅಷ್ಟೊಂದು ಕಾಳಜಿ ಮಮಕಾರಕ್ಕೆ.
ಹೂವಿನ ಮಕರಂದದ ಸ್ವಾದದ ಅರಿವು ಅದನ್ನು ಸವಿದ ಪಾತರಗಿತ್ತಿ ಗಷ್ಟೇ ಗೊತ್ತು. ನಿನ್ನ ಅರಿತ ನನಗಷ್ಟೇ ಗೊತ್ತು ನಿನ್ನ ಪ್ರೀತಿಯ ಸವಿ. ಆ ಭಾನು ಭುವಿ ಕಣ್ಣಂಚಿನಲಿ ಒಂದಾಗದಿದ್ದರೂ ಕೊನೆ ಅಂಚಿನಲಿ ಇಬ್ಬರು ಸೇರಿಕೆಯ ಆನಂದವಂತು ಇದ್ದೆ ಇದೆ. ನಿನ್ನ ಅಗಲಿಕೆಯ ನೆನಪನ್ನು ಸಹಿಸುವ ಶಕ್ತಿ ನನ್ನಲಿಲ್ಲ ಗೆಳೆಯ . ಅರಿತು ಭಾಳುವ ಗುಣವಿದ್ದರು..
ನಾ.. ನಿನ್ನ ಪ್ರೀತಿಸುತ್ತಲೇ ಕೊನೆ ಉಸಿರಿನ ಆಸೆ ತೀರಿಸಬೇಕೆಂದು ಹುಚ್ಚು ಆಸೆ. ಮಳೆ ಹನಿಗಳು ಒಂದೊಂದಾಗಿ ಭೂ ಸ್ಪರ್ಶ ಮಾಡುವಾಗ ತೆನೆ ಭರಿತ ಫಸಲು ಕುಣಿದಾಡುವಂತೆ ನಿನ್ನ ನೋಡಿದಾಗ ನನ್ನ ಮನಸ್ಸು ತನ್ನ ಸ್ಥಿರತೆ ಕಳೆದುಕೊಂಡಿತಂತೆ. ಆದರೇನಂತೆ ಕಂದ ನೀನೇ ನನ್ನ ಪ್ರಿಯತಮ.ಮಳೆ ಹನಿಗಳು ಕುಣಿಯುತ್ತಾ ಮೊದಲು ಭೂ ಸ್ಪರ್ಶ ಮಾಡುವಾಗ ಭೂಮಿ ತನ್ನ ಸುಗಂಧವನ್ನು ಸುರಿಸುವುದು ಅದರ ಅರಿವು ತಿಳಿದವರಿಗಷ್ಟೆ ಗೊತ್ತು ಸ್ವಾದದ ಮಾಯೆ. ನಾನು ಅಷ್ಟೇ ನಿನ್ನ ಪ್ರೀತಿಯ ಸ್ವಾದದಲೀ ನನ್ನೆ ಮರೆತೇ ನಾ.
ಅದೆಗೆ ತಿಳಿಸಲಿ ನಾ ನಿನಗೆ ನೀನೇ ಬೇಕೆಂದು. ಅರಿಯದೆ ಪರಿಚಿತನಾದೆ. ಅರಿಯದೆ ಮನಸ ಕದ್ದೆ. ಪ್ರೀತಿಯ ಆಸರೆಯ ಆಸೆಯನ್ನೇ ಹೊತ್ತಿಲ್ಲ ನಾನು. ಆದರೂ ಅದರಲ್ಲಿ ನನ್ನೆ ಮರೆಸಿದೆಯಲ್ಲ. ಸುಮ್ಮನೆ ಬರೆಯುತ್ತಾ ಹೋದೆ ನಿನ್ನ ವರ್ಣನೆ ಮಾಡಲು ಸಾಲದು ನನಗೆ ಸಮಯದ ಕ್ಷಣ. ನಿನ್ನ ಮೌನವೆ ನನ್ನ ನಾಚಿಕೆಯ ಬಡಿದೆಬ್ಬಿಸಿತು. ನಿನ್ನ ನಗುವೇ ಮನಸನ್ನು ತಲ್ಲಣಗೊಳಿಸಿತು. ಆ ನಿನ್ನ ಸ್ಪರ್ಶ ಎಲ್ಲ ನೋವನ್ನು ಮರೆಮಾಚುವ ಔಷಧ. ಒಂದು ಪುಸ್ತಕವನ್ನೇ ಬರೆಯಬೇಕೆಂಬ ಆಸೆ ನಿನ್ನ ಹೊರತಾಗಿ.
ಕನಸಿನ ಕಲ್ಪನೆಯಲ್ಲಿ ಜೀವನ ಕಳೆಯುವ ಆಸೆಯ ಹುಚ್ಚು ನನಗಿಲ್ಲ ಕನಸೇ ಬೇಡ ನನಗೆ ನಿನ್ನ ಹೊರತು. ನೋವಲ್ಲು ನಿನ್ನ ನೆನಪೇ ನಗುವಲ್ಲು ನಿನ್ನ ನೆನಪೇ. ನಾ ಅಂದುಕೊಂಡೆ ಗೆಳೆಯಾ, ನೀ ನನಗೆ ಸರಿಸಾಟಿಯೇ ಎಂದೂ ಈಗ ಅರಿಯುತಿಹುದು ನಿನ್ನ ನನ್ನ ನೈಜತೆಯ ಪ್ರೀತಿ ಎಂದು. ಅದೆಷ್ಟೋ ಪ್ರೇಮಿಗಳ ಕಥೆಗಳ ನಾನು ಓದಿರುವೆ ಗೆಳೆಯಾ ಅದರೂ ಅದಕ್ಕೂ ಮಿಗಿಲು ನಮ್ಮ ಪ್ರೀತಿ. ಎಲ್ಲವನ್ನೂ ಅರಿತು ಸಮ್ಮತಿಸುವೆ ನೀನು ಒಮ್ಮೊಮ್ಮೆ ತಪ್ಪನ್ನು ತಿದ್ದುವೆ ಪ್ರೀತಿಯಲ್ಲಿಯೇ ಅದಂತೂ ಮನ ತಲ್ಲಣಗೊಳ್ಳುವ ಕ್ಷಣ. ನಾ ಅಂದುಕೊಂಡಿದ್ದೆ ಗೆಳೆಯಾ ಪ್ರೀತಿಯಲಿ ಏನಿದೆ ಎಂದು ಎಲ್ಲರ ಪ್ರೇಮ ಕಥೆಯ ನೋಡಿ ಇದೇನು ಪ್ರೀತಿಯೇ ಇಲ್ಲ ಇವರ ಆಸೆಗೆ ಒಂದು ಕ್ಷಣವೇ ಎಂದು. ನಿನ್ನ ಪ್ರೀತಿಯಲಿ ಅರಿತೆ ಪ್ರೇಮದ ಅರ್ಥ .ಬಿಳುಪಿನಲ್ಲಿರುವುದೆಲ್ಲ ಹಾಲಲ್ಲ ಎನ್ನುವರು ಹೌದು ಗೆಳೆಯಾ ಎಲ್ಲ ಪ್ರೀತಿಯ ನಾಟಕದ ಈ ಜಗತ್ತಿನಲ್ಲಿ ನಮ್ಮದೊಂದು ನೈಜ ಪ್ರೀತಿಯ ಪ್ರತೀಕ.ಸೇರಲು ಸಾಧ್ಯವಾಗದೆಂದರು ನೀನು ನನ್ನ ಪ್ರೀತಿಸುವೆ ಎಂದು ಹೇಳಿದಾಗ ಅರಿಯಿತು ಗೆಳೆಯಾ ನಿನ್ನ ಪ್ರೀತಿಯ ಮಾಯೆಯ.ಸಾಕಿದವರ ಮರೆಯಬೇಡ ಸಲಹಿದವರ ನೋಯಿಸಬೇಡ ಎಂದು ಪ್ರೀತಿಸುವೆಯಲ್ಲ ಗೆಳೆಯಾ. ಇದೇನು ಮಾಯೆಯೇ. ಪ್ರೇಮಿಗಳ ದಿನಕ್ಕೆ ಶುಭ ಹಾರೈಕೆ ನಿನ್ನ ಪ್ರೀತಿ ಎಂದು ನಿನ್ನೊಂದಿಗೆ ಸದಾ ಇರುವುದು ಪ್ರೀತಿಸುತ್ತಲೇ…
ಇಂತಿ ನಿನ್ನ ಪ್ರಿಯತಮೆ…
– ರಕ್ಷಿತಾ ಜೈನ್
ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು