Back To Top

 ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಬೆಂಗಳೂರು: ದೇಶದ ಉನ್ನತಿ ಮತ್ತು ಅವನತಿಗಳೆರಡು ಯುವಜನತೆಯನ್ನು ಅವಲಂಬಿಸಿರುತ್ತವೆ. ಯುವ ಜನತೆಯನ್ನು ಅಗತ್ಯವಾದ ತರಬೇತಿಯೊಂದಿಗೆ ಸದೃಢಗೊಳಿಸಿದಾಗ ದೇಶವು ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದು ಬೆಂಗಳೂರಿನ ಸರ್ವೋದಯ ಮಂಡಳಿಯ ಅಧ್ಯಕ್ಷ‌ರಾದ ಡಾ.ಎಚ್.ಎಸ್. ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ “ವರ್ತಮಾನದ ಯುವ ಜನತೆಗೆ ಗಾಂಧಿ ತತ್ವದ ಅಗತ್ಯ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಮೂಲತತ್ವಗಳ ಆಧಾರದ ಮೇಲೆ ಎನ್ಎಸ್ಎಸ್ ರೂಪುಗೊಂಡಿರುವುದು. ಗಾಂಧೀಜಿಯವರು ಯುವ ಜನತೆಯ ಮೇಲೆ ಅಪಾರವಾದ ಭರವಸೆ ಹೊಂದಿದ್ದರು. ಯುವಜನತೆ‌ಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಂಬಿದ್ದರು. ಆದರೆ ಇಂದಿನ ತಲೆಮಾರು ಗಾಂಧೀಜಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪು ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಮುದಕಪ್ಪ ಹಾಗೂ ಡಾ. ಅವಿನಾಶ್, ಡಾ. ಶುಭಾ ಮರವಂತೆ, ಡಾ. ಅರುಣ್ ಮತ್ತು ಸಹ್ಯಾದ್ರಿ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನ ಸ್ವಯಂಸೇವಕ ಮತ್ತು ಸೇವಕಿಯರು ಭಾಗವಹಿಸಿದ್ದರು.

Prev Post

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

Next Post

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

post-bars

Leave a Comment

Related post