
ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಎನ್-ಇಗ್ಮಾ2025 ‘ಯುಗಾರ್ಥ’ ಉದ್ಘಾಟನೆ
Nitte : ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜು ಆಯೋಸಿರುವ ರಾಜ್ಯ ಮಟ್ಟದ ಎರೆಡು ದಿನಗಳ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಎನ್-ಇಗ್ಮಾ2025- ಯುಗಾರ್ಥ’ವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಪ್ರೊ ಡಾ.ಸುಮಾ ಬಲ್ಲಾಳ್ ಉದ್ಘಾಟಿಸಿದರು.
ಸದಾನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಉದ್ಘಾಟನೆಯನ್ನು ನೆರೆವೇರಿಸಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎನ್ನುವ ವಿದ್ಯಾರ್ಥಿಗಳ ಉತ್ಸಾಹ, ವಿವಿಧ ಸ್ಪರ್ಧೆಗಳಿಗಾಗಿ ನಡೆಸುವ ತರಬೇತಿ ಅಭ್ಯಾಸಗಳೇ ನಿಜವಾದ ಗೆಲುವು. ಪ್ರಶಸ್ತಿಗಳು ಇಂದು ಗಳಿಸಿದ ಅಂಕಕ್ಕೆ ಸೀಮಿತ ಆದರೆ ಸ್ಪರ್ಧೆಯ ಹಿಂದಿನ ಪ್ರಯತ್ನಗಳು ಬದುಕಿನುದ್ದಕ್ಕೂ ಗೆಲುವನ್ನು ತಂದುಕೊಡುತ್ತವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ಈ ರೀತಿಯ ಅಂತರ್ ಕಾಲೇಜು ಸ್ಪರ್ಧೆಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಏಕಾಂಗಿತನದಲ್ಲಿ ಕಳೆದು ಹೋದ ವಿದ್ಯಾರ್ಥಿ ಸಮುದಾಯವನ್ನು ಮತ್ತೆ ವಾಸ್ತವ ಬದುಕಿಗೆ ಕರೆತರವಂತೆ ಮಾಡುತ್ತದೆ, ಸ್ಪರ್ಧೆಗಳಲ್ಲಿ ಇರುವಷ್ಟು ಸಮಯ ವಿದ್ಯಾರ್ಥಿಗಳು ಪರಸ್ಪರ ಮಾತು,ಚರ್ಚೆ,ಹಾಡು,ಕುಣಿತ,ಆಟಗಳ ಮೂರ್ತ ಜಗತ್ತಿನಲ್ಲಿ ಸಂಚರಿಸುತ್ತಾರೆ. ಇದೇ ಒಂದು ಸಂಸ್ಥೆಯಾಗಿ ನಾವು ಈ ಸಮಾಜಕ್ಕೆ ಕೊಡುವ ಪುಟ್ಟ ಕೊಡುಗೆ ಎಂದು ಭಾವಿಸಿದ್ದೇವೆ ಎಂದು ಹೇಳಿ ಆಗಮಿಸಿದ ಎಲ್ಲ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಆಗಮಿಸಿದ ಅತಿಥಿಗಳನ್ನು ಐಕ್ಯೂಎಸಿ ಸಂಯೋಜಕ ಪ್ರಕಾಶ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಮೇಶ್ ಎಂ ವಂದಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಅಮನ್ ಎಸ್ ಪ್ರಸ್ತಾವಿಸಿದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ ರಾವ್ ಉಪಸ್ಥಿರಿದ್ದರು ಹಾಗೂ ಕಾರ್ಯಕ್ರಮವನ್ನು ವಿದ್ಯಾರ್ಥಿ ಚಂದ್ರಮೌಳಿ ಭಂಡಾರಿ ನಿರೂಪಿಸಿದರು. ಸುಮಾರು 20 ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರೆಡು ದಿನಗಳ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು.