Back To Top

 ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ “ಸಂಸ್ಕೃತಿ ಸಿಂಚನ” ಕಾರ್ಯಕ್ರಮ

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ “ಸಂಸ್ಕೃತಿ ಸಿಂಚನ” ಕಾರ್ಯಕ್ರಮ

ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಡಿಸೆಂಬರ್ 28, 2023 ರಂದು Ethnic Day ಕಾರ್ಯಕ್ರಮವು “ಸಂಸ್ಕೃತಿ ಸಿಂಚನ” ಎಂಬ ಹೊಸ ಪರಿಕಲ್ಪನೆಯಲ್ಲಿ ನಡೆಯಿತು.

ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪರಿಚಯಿಸುವ ಉದ್ದೇಶದಲ್ಲಿ ಈ ವಿಭಿನ್ನ ಕಾರ್ಯಕ್ರಮ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಹ್ಮಣ್ಯ ಉದ್ಘಾಟಿಸಿ, ದೇಶದ
ಸಂಸ್ಕೃತಿ ಮತ್ತು ಸಂಪ್ರದಾಯ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವೈ.ಸಿ
ಕಮಲಾ, ಕಾಲೇಜು ಪರಿಷತ್ ಕಾರ್ಯದರ್ಶಿ ಡಾ.ಪಿ.ಎಲ್. ರಮೇಶ್, ಕಾಲೀಜಿನ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ (Cultural coordinator) ಪ್ರೊ.ಭರತ್, ಡಾ.ರಮ್ಯಾ ನಾಗೇಶ್ ಮತ್ತು
ಇತರರು ಉಪಸ್ಥಿತರಿದ್ದರು.
Prev Post

ಕ್ರೋಧಾತ್ಮ | ಮನೋಜ್ ಮಾರುತಿ

Next Post

ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

post-bars

Leave a Comment

Related post