Back To Top

 ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಮಂಗಳೂರು : ಸಾಹಿತ್ಯದ ಮೂಲಕ ಸಮಾಜದ ಅಂಕು – ಡೊಂಕುಗಳನ್ನು ತಿದ್ದಿ, ವೈಚಾರಿಕ ಕ್ರಾಂತಿ ಮಾಡಿದರವರು ಕುವೆಂಪು ಎಂದು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರಳ ಜೀವನವನ್ನು ಭೋದಿಸಿದ್ದಲ್ಲದೇ, ಅಳವಡಿಸಿಕೊಂಡು ಬದುಕಿ ತೋರಿಸಿದವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೇ ನೀಡಿದ್ದಾರೆ ಎಂದರು.

ಇದೇ ವೇಳೆ ಕುವೆಂಪು ಅವರ ಜೀವನ ದೃಷ್ಟಿ, ವಿಚಾರಶೀಲತೆ ಯುವಜನತೆ ಅಳವಡಿಸಿಕೊಳ್ಳಬೇಕಾದ ಆದರ್ಶ ಎಂದು ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಪ್ರೋ. ರಾಮಕೃಷ್ಣ ಬಿ. ಎಂ ಹೇಳಿದರು.

ಕಾರ್ಯಕ್ರಮದಲ್ಲಿ ‘ಪಾಂಚಜನ್ಯ’ ಮತ್ತು ‘ಕೌಟಿಲ್ಯನ ಅರ್ಥಶಾಸ್ತ್ರ’ ಕೃತಿಗಳ ವಿಮರ್ಶೆ ಮಾಡಲಾಯಿತು. ಇದರ ಜೊತೆಯಲ್ಲಿ ಕುವೆಂಪು ಅವರ ಪುಸ್ತಕ ಪ್ರದರ್ಶನವೂ ನಡೆಯಿತು.

ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ.ಎನ್‌., ಡಾ. ನಾಗರತ್ನ ರಾವ್‌, ಡಾ. ಮೀನಾಕ್ಷಿ ಎಂ. ಎಂ., ಪ್ರೋ. ಅಬುಬಕ್ಕರ್‌ ಸಿದ್ದಿಕ್‌, ಪ್ರೋ. ಗಣಪತಿ ಗೌಡ ಉಪಸ್ಥಿತರಿದ್ದರು.

Prev Post

ಗುರು | ಪೂರ್ಣಿಮಾ

Next Post

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

post-bars

Leave a Comment

Related post