
TEDx ಸಂತ ಅಲೋಶಿಯಸ್ 2025 ರ ಅಧಿಕೃತ ಉದ್ಘಾಟನೆ
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಎಲ್ ಸಿ ಆರ್ ಐ ಬ್ಲಾಕ್ ನ ಎಲ್. ಎಫ್. ರಾಸ್ಕ್ವಿನ್ಹಾ ಹಾಲ್ ನಲ್ಲಿ ‘ಎ ಟ್ವಿಸ್ಟ್ ಆಫ್ ಟೇಲ್ಸ್’ ಎಂಬ ವಿಷಯದ ಮೇಲೆ TEDx ಸಂತ ಅಲೋಶಿಯಸ್ ನ 2025ರ ಅಧಿಕೃತ ಬಿಡುಗಡೆ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಮಾಜಿ ಐ ಆರ್ ಎಸ್ ಅಧಿಕಾರಿ, ಲೇಖಕಿ ಮತ್ತು ಉದ್ಯಮಿ ಜಿಸೆಲ್ ಮೆಹ್ತಾ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಎ ಟ್ವಿಸ್ಟ್ ಆಫ್ ಟೇಲ್ಸ್’ ನೊಂದಿಗೆ ವ್ಯಕ್ತಿಯ ಜೀವನದಲ್ಲಿ ಬರುವ ತಿರುವುಗಳು ವ್ಯಕ್ತಿಯ ವ್ಯಕ್ತಿತ್ವ ರೂಪಣೆಗೆ ಹಾಗೂ ಉತ್ಕೃಷ್ಟ ಮಟ್ಟದ ಸಾಧನೆಗೆ ಹೇಗೆ ಸಹಾಯಕವಾಗುವುದೆಂದು ತಿಳಿಸಿದರು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆವರೆಂಡ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್.ಜೆ ಅವರು ವಹಿಸಿದ್ದರು. ಉಪಕುಲಪತಿ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ, ಸಿಬ್ಬಂದಿ ಸಂಚಾಲಕಿ ಡಾ.ಸ್ಮಿತಾ ಡಿ.ಕೆ., ಮುಖ್ಯ ಅತಿಥಿ ಜಿಸೆಲ್ ಮೆಹ್ತಾ, ಗೌರವ ಅತಿಥಿ ಮಿಥುನ್ ಬೋಳೂರು, ಸಂತ ಅಲೋಶಿಯಸ್ ಕಾಲೇಜನ (ಸ್ವಾಯತ್ತ) ರಿಜಿಸ್ಟ್ರಾರ್ ಡಾ.ಆಲ್ವಿನ್ ಡಿ’ಸಾ, ಮತ್ತು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್., ಡಾ.ಮನು ಮೆಲ್ವಿನ್ ಜಾಯ್, ಕಿರಣ್ ಡೆಂಬ್ಲಾ, ಪೂನಂ ವೈದ್ಯ, ಪವನ್ ಜೋಶಿ ಮತ್ತು ವೆನ್ಸಿಟಾ ಡಯಾಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಿಸ್ ಟೀನ್ ವರ್ಲ್ಡ್ ಸೂಪರ್ ಮಾಡೆಲ್ ಗ್ಲೋಬಲ್ ಮತ್ತು ನಟಿ ವೆನ್ಸಿಟಾ ಡಿಯಾಸ್ , ಫಿಟ್ನೆಸ್ ತರಬೇತುದಾರ, ಬಾಡಿ ಬಿಲ್ಡರ್, ಪ್ರೇರಕ ಭಾಷಣಕಾರ, ಪರ್ವತಾರೋಹಿ ಡಿಜೆ ಕಿರಣ್ ಡೆಂಬ್ಲಾ, ಹಿರೆನಬಾ ಇಂಡಸ್ಟ್ರೀಸ್ ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಸದಾಶಿವ್ ಕೆ ಶೆಟ್ಟಿ, ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಸ್ಥಾಪಕ ಅಧ್ಯಕ್ಷ ಡಾ.ಯೂಸುಫ್ ಕುಂಬ್ಳೆ, ಪೂನಂ ವೈದ್ಯ ಸೇರಿದಂತೆ, ಬಿಬಿಸಿ ಮತ್ತು ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಮಾನವ ಸಂಪನ್ಮೂಲ ಹಿರಿಯ ವಿಶ್ಲೇಷಕ, CUSAT ಸಹಾಯಕ ಪ್ರಾಧ್ಯಾಪಕ ಡಾ.ಮನು ಮೆಲ್ವಿನ್ ಜಾಯ್, ಭಾರತದ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಂಜಯ್ ಹೆಗ್ಡೆ, ಅಡವಿ ಅಲರ್ಟ್ ಫೌಂಡೇಶನ್ ನ ಸಂಸ್ಥಾಪಕ ಮತ್ತು ಸಂರಕ್ಷಣಾವಾದಿ ಪವನ್ ಜೋಶಿ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.