Back To Top

 ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ : ಪಠ್ಯ ಪುಸ್ತಕ ಅನಾವರಣ । Canara College

ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ : ಪಠ್ಯ ಪುಸ್ತಕ ಅನಾವರಣ । Canara College

ಮಂಗಳೂರು: ಕೆನರಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹಾರ್ದಿಕ್ ಪಿ ಚೌಹಾಣ್ ಅವರು ಬರೆದ ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ ಎಂಬ ಒಪ್ಶನಲ್ ಕೋರ್ಸ್ ಪಠ್ಯ ಪುಸ್ತಕವನ್ನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್ ಬಿ.ಕಾಂ (ಎಸ್‌ಇಪಿ) ತರಗತಿಗಾಗಿ ಇದನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಇಂತಹ ಪುಸ್ತಕಗಳು ಇನ್ನಷ್ಟು ಪ್ರಕಟವಾಗಲಿ ಎಂದು ಕಾಲೇಜಿನ ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ ಉಪಪ್ರಾಂಶುಪಾಲೆ ಡಾ. ಕಲ್ಪನಾ ಪ್ರಭು, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀಮಾ ಪ್ರಭು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದೇಜಮ್ಮ ಎ, ಶ್ರೀಮತಿ ಪುಷ್ಪಲತಾ ಮುಂತಾದವರು ಉಪಸ್ಥಿತರಿದ್ದರು.

 

Prev Post

ಅಲೋಶಿಯಸ್ ವಿವಿಯಲ್ಲಿ ರಕ್ತದಾನ ಶಿಬಿರ

Next Post

ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು | Brijesh Chowta

post-bars

Leave a Comment

Related post