ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ
ಶೂನ್ಯದಿಂದ ಬದುಕು ಕಟ್ಟಿಕೊಳ್ಳಲು ಹೊರಟವನು ನಾನು
ಕಳೆದುಕೊಳ್ಳಲು ನನ್ನಡೆ ಏನೂ ಇಲ್ಲ
ಸೋತರೂ ಗೆದ್ದರೂ
ಬದುಕಿನ ಮೇಲಿರುವ ಒಲವು ಮಾತ್ರ
ಕಿಂಚಿತ್ತೂ ಕಡೆಮೆಯಾಗಲ್ಲ.
ಅಡ್ಡ ದಾರಿಯಲ್ಲಿ ಗೆದ್ದು ಬೀಗುವವರು
ಯಾರ ಸಹಾಯ ಇಲ್ಲದೆ ಸ್ವ ಪ್ರಯತ್ನದಿಂದ
ಮಂಡೆ ಸವೆಸಿಕೊಂಡು ಹತ್ತಲು
ಯತ್ನಿಸುವವರನ್ನು ನೋಡಿ ಅಣಕಿಸುತ್ತಾರೆ
ಬಹುಶಃ ಅವರಿಗೆ ಈ ಬಡ ಬದುಕಿನ
ಕಣ್ಣೀರ ಕಡಲಿನ ಆಳ ತಿಳಿದಿರಕ್ಕಿಲ್ಲ.
ನಮ್ಮ ಬದುಕು ಅವಿರತವಾದ
ಹೋರಾಟದ ಫಲವೇ ಹೊರತು.
ಯಾರೋ ಅನುಕಂಪದಿಂದ
ಕೊಟ್ಟ ಪ್ರಸಾದವಲ್ಲ.
ಬೆನ್ನು ಹಿಂದಿನ ಮಾತುಗಳಿಗೆ
ಸಮಯ ವ್ಯಯ ಮಾಡುವ
ವ್ಯವದಾನವಂತೂ ಈ ಬಡಪಾಯಿಗಿಲ್ಲ.
ಊರ ಮಂದಿ ನೂರು ಮಾತಾಡಲಿ
ಗಳಿಸುವುದಕ್ಕೂ ಉಳಿಸುವುದಕ್ಕೂ
ನಾನು ಬದುಕುತ್ತಿಲ್ಲ
ಬೆನ್ನು ಹಿಂದಿನ ಮಾತುಗಳನ್ನು ಕೇಳಲು
ಈಗಂತೂ ನನ್ನ ಕಿವಿಗಳು ಒಪ್ಪುವುದಿಲ್ಲ.
– ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ
ಸಮಾಜ ಕಾರ್ಯ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.