Back To Top

 ಗುರು | ಪೂರ್ಣಿಮಾ
ಕನ್ನಡ ಎಂ.ಎ ವಿದ್ಯಾರ್ಥಿನಿ ಪೂರ್ಣಿಮಾ ಅವರು ಬರೆದ ‘ಗುರುವೇ ನಿಮಗ್ಯಾರು ಸಮ’ ಕವಿತೆ.

ಗುರುವೇ ನಿಮಗ್ಯಾರು ಸಮ
ನೀವು ಮುಕ್ಕೋಟಿ ದೇವತೆಗಳಿಗೆ ಸಮ
ಬ್ರಹ್ಮ ವಿಷ್ಣು ಗುರುವಿಗೆ ಸಮ, ಶಿವನಿಗೆ ಸಮ//೧//

ಬಿಳಿ ಹಾಳೆಯಂತ ಮಕ್ಕಳ ಮನಸಲ್ಲಿ
ಕನಸನ್ನು ಬಿತ್ತುವವರು ನೀವು
ಗುರುವೇ ನಿಮಗ್ಯಾರು ಸಮ
ನೀವು ಮುಕ್ಕೋಟಿ ದೇವತೆಗಳಿಗೆ ಸಮ//೨//

ಶಿಕ್ಷಣಕ್ಕೆ ಸಾರಥಿ ನೀವು
ಜಗದ ಭವಿಷ್ಯ ಬದಲಾಯಿಸುವವರು ನೀವು
ಗುರುವೇ ನಿಮಗ್ಯಾರು ಸಮ
ನೀವು ಮುಕ್ಕೋಟಿ ದೇವತೆಗಳಿಗೆ ಸಮ //೩//

ಅಂಧಕಾರವ ಓಡಿಸುವವರು ನೀವು
ಜ್ಞಾನ ಜ್ಯೋತಿಯ‌ ಎಲ್ಲರಲ್ಲೂ ಬೆಳಗುವ ನೀವು
ಗುರುವೇ ನಿಮಗ್ಯಾರು ಸಮ
ನೀವು ಮುಕ್ಕೋಟಿ ದೇವತೆಗಳಿಗೆ ಸಮ//೪//

ಸಾಧಕರನ್ನು ಸೃಷ್ಟಿಸುವವರು ನೀವು
ಸೂರ್ಯನಂತೆ ಸದಾ ಪ್ರಜ್ವಲಿಸುವವರು ನೀವು
ಗುರುವೇ ನಿಮಗ್ಯಾರು ಸಮ
ನೀವು ಮುಕ್ಕೋಟಿ ದೇವತೆಗಳಿಗೆ ಸಮ//೫//

ಕಲ್ಲನ್ನು ಕೆತ್ತಿ ಮೂರ್ತಿ ಮಾಡುವವರು ನೀವು
ಮಕ್ಕಳ ಮನಸ್ಸಿನಲ್ಲಿ ದೇವರಾಗಿ ಇರುವವರು ನೀವು
ಗುರುವೇ ನಿಮಗ್ಯಾರು ಸಮ ನೀವು
ಮುಕ್ಕೋಟಿ ದೇವತೆಗಳಿಗೆ ಸಮ//೬//

ಪೂರ್ಣಿಮಾ
ಕನ್ನಡ ಎಂ.ಎ ವಿದ್ಯಾರ್ಥಿನಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು

Prev Post

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ…

Next Post

ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

post-bars

Leave a Comment

Related post