Back To Top

 ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ
ಹೊತ್ತಿ ಉರಿದರೂ ಬಾಯಿಗೆ
ಹೊಲಿಗೆ ಹಾಕಿಕೊಳ್ಳುವ
ಷಂಡನಲ್ಲ ನಾನು/
ದುಷ್ಟಶಕ್ತಿಗಳು ಮೂಗು ಹಿಡಿದು
ನನ್ನುಸಿರ ಒತ್ತಿ ಹಿಡಿದರೂ ಕನ್ನಡ
ಎಂದು ಕೂಗುವ ಬಗ್ಗದ ಕನ್ನಡದ ಭಂಡ ನಾನು//

ಮೇಲಷ್ಟೇ ಕನ್ನಡ ಎಂದು ನುಡಿದು, ಪರಭಾಷೆಯ ಪಾದ ಹಿಡಿಯುವ ಹೊಂಬನಲ್ಲ ನಾನು/
ಒಳಹೊರಗೂ ಅ,ಆ,ಈ,ಈ, ಸೇವಿಸುವ ಕನ್ನಡದ ಗಟ್ಟಿ ಕಂಬ ನಾನು//
ನಾನಲ್ಲ ಭಾಷೆಯ ಬಿಗುಮಾನದಲ್ಲಿ ಅರಚುವ ಹುಚ್ಚು ಪುಂಗಿದಾಸ/
ನನ್ನದು ದಕ್ಷಿಣ ಪಥೇಶ್ವರ

ಇಮ್ಮಡಿ ಪುಲಿಕೇಶಿಯ ಇತಿಹಾಸ//
ನಾನಲ್ಲ ಪಕ್ಷಗಳ ಸಿದ್ದಾಂತಕ್ಕೆ
ನಾಡಿಗೆ ಕೊಳ್ಳಿ ಇಡುವ ರಾಜಕೀಯ ಭೂಪ/
ನಾನು ನನ್ನಂತವರು ಸಿಡಿಲಾಗಿ
ಸಿಡಿದೆದ್ದರೆ ಸಂಭವಿಸಬಹುದು ಭೂಕಂಪ//

-ಮೌನೇಶ
ಬಿ.ಎ ಪ್ರಥಮ ಸೆಮಿಸ್ಟರ್

Prev Post

ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

Next Post

ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್…

post-bars

2 thoughts on “ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

Shanthkumar kalesays:

ಕನ್ನಡದ ಕಂದ….. ನಿನ್ನ ಕವಿತೆ ಓದಲು ಅದ್ಏನೋ ಆನಂದ ❤

Reply

Good

Reply

Leave a Comment

Related post