Back To Top

 ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ನಾ ಅವಳು, ನೀವು ಆದರ್ಶವೆಂದು
ಹೇಳೋ ರಾಮನ ಕಾಲದಲ್ಲೂ
ಗೆರೆ ದಾಟದೀರೆಂದು ಅಪ್ಪಣೆಗೊಳಗಾದವಳು
ಅಪ್ಪಣೆಗೊಳಗಾಗಿ ನನ್ನ ರೆಕ್ಕೆಗಳ ಮುದುರಿ ಕುಳಿತವಳು
ಆತನಾತ್ಮಕೆ ಸಿಕ್ಕು ಆರ್ತನಾದವಾದವಳು

ನಾ ಅವಳು,..
ಆತನೆಲ್ಲ ಸುಖಕೆ ಬೇಕಾದ
ಹಲವುಗಳಲಿ ಹುಟ್ಟು ಮೂಕವಾಗಿ
ಮಾತು ಹೊಲೆದ ಸುಂದರತೆ ಬಳಿದ
ಬರಿಯ ಸ್ವತ್ತು ‘ಅವನ’ ಸ್ವತ್ತು, ಯುಗಯುಗಗಳಿಂದ..

ರೆಕ್ಕೆ ಒಣಗಿವೆ, ಒಡಲ ಮಾತು ಕಣ್ಣ ಹನಿಗಳಾಗಿವೆ
ಸಹಸ್ರ ವರುಷಗಳಿಂದ, ಇಂದಿಗೂ “ದಾಟದಿರು”
ಎಂಬ ಕೂಗೆ ಕೇಳುತ್ತಿದೆ ಆದರಿಗ..
ಪುರುಷ ಮಾಯಾಮೃಗಕ್ಕೆ ಮರುಳಾಗೋ ಮೂರ್ಖಳಲ್ಲ
ಮೊನಚು ರೆಕ್ಕೆಗಳ ಚಾಚಹತ್ತಿರುವೆ
ಗೆರೆಯನ್ನಷ್ಟೇ ಅಲ್ಲ, ‘ಆತ’ ಕಟ್ಟಿರುವ ಕಟ್ಟುಪಾಡುಗಳ ಅಣೆಕಟ್ಟನೊಡೆದು..
ಸಾಕಿನ್ನು..ಬೇಕಿಲ್ಲ ಮಾತೆ ಪಟ್ಟವಿತ್ತು ಮಾತ
ಹಿಸುಕಿ ಮೂಲೆಗೊತ್ತಿದ್ದೂ
ಏಕೆಂದರೆ ಅವಳೆಂಬ ನಾ ‘ನನ್ನ ಸ್ವತ್ತು’,
ಹೊರಟಿರುವೆ ಸ್ವತಂತ್ರತೆಯ ಸ್ವಂತಿಕೆಯ ಸಿಡಿಲಲೆದ್ದು.

ದಿವ್ಯಾ ಕರಬಸಪ್ಪ.
ಬಿ.ಎ. 5ನೇ ಸೆಮಿಸ್ಟರ್‌
ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ.

Prev Post

ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್‌ ಸೌಲಭ್ಯ | ವಿಜಯಕುಮಾರ ಹಿರೇಮಠ

Next Post

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

post-bars

Leave a Comment

Related post