ಛಲ | ಪೂಜಾ ಹಣಮಂತ ಸುಣಗಾರ
ನಡೆ ಮುಂದೆ ನಡೆ ಮುಂದೆ
ಕಷ್ಟವ ಸಹಿಸಿ ಸಾಗು ಮುಂದೆ
ಸಾಗಬೇಕು ನೀ ಕುಗ್ಗದೆ
ಸನ್ಮಾನಿಸುವರು ನಿನಗೆ ತಿಳಿಯದೆ.
ಜಗತ್ ಹಿಂದೆ ಸಾಗುತಿಹುದು ಬದುಕು
ಸಾಧನೆಯ ಗುಟ್ಟನ್ನು ನೀ ಕೆಣಕು
ಜಗತ್ತಿನಲ್ಲಿ ಉಳಿವುದು ನಿನ್ನ ಗುರುತು
ನಗುತಿರು ನೀ ನೋವ ಮರೆತು.
ಬಡಿದೆಚ್ಚರಿಸು ನಿನ್ನ ಕನಸು
ಛಲದಿ ಸಾಗಲಿ ನಿನ್ನ ಮನಸು
ನೊಂದವರಿಗೆ ನೀನು ಹರಸು
ನೋವುಗಳಿಗೆ ನೀ ಸ್ಮರಿಸು.
ಕತ್ತಲೆ ಹೋದರೆ ತಾನೇ ಬೆಳಕು
ನೋವು ಉಂಡರೇ ತಾನೇ ಬದುಕು
ಇದನ್ನೆಲ್ಲಾ ನೀನು ಅರಿತು
ನನಸಾಗಿಸಬೇಕು ನಿನ್ನ ಕನುಸು.
ಸೋಲ ಹಿಂದೆ ಇರುವುದು ಗೆಲುವು
ಸೋಲಿಗೆ ನೀಡಬೇಕು ನೀ ಒಲವು
ಸರಿಯಾಗಿ ಸಾಗುವುದು ನಿನ್ನ ಬಾಳು
ಧನದ ಹಿಂದೆ ಹೋದರೆ ನೀ ಹಾಳು.
– ಪೂಜಾ ಹಣಮಂತ ಸುಣಗಾರ
ಪ್ರಥಮ ಸೆಮಿಸ್ಟರ್ ಬಿಎ
ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ