Back To Top

 ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲ
ನಗುವ ಅಳಿಸುವವನಲ್ಲ
ಉಸಿರಾಗಿ ಇರಿಸಿದವನು |
ನಾ ನಿನ್ನ ಒಲವ ಬಯಸಿದವನು.

ಕಾಡಿಸಬೇಡ ಮನವೇ
ಕಾಡಿಸದಿರು ನನ್ನೊಲವೇ
ಕಾಡಿ ಕಾಡಿ ಕೊಡುವುದಾದರು ಏನು ?
ನಾ ಬಯಸಿದ್ದು ನಿನ್ನ ಒಲವು.

ನಿನ್ನ ಬಗ್ಗೆ ಪ್ರೇಮವಿಲ್ಲ
ಪ್ರೀತಿ ಆಳವಾಗಿದೆ
ಮನದ ಆಳ ತುಂಬಿಸಲು
ನಾ ನಿನ್ನ ಒಲವ ಬಯಸಿದೆ.

ಮಾತು ಮಾತು ಮಾತಿಗೊಮ್ಮೆ
ನಿನ್ನ ಜೊತೆ ಜಗಳವಾಡುವೆ
ಜಗಳವೇ ಹೊರಳಿ ಮರಳಿ
ಒಲವಾಗಿ ನಿನ್ನಿಂದ ಬಯಸುವೇ.

ಈಗಲೇ ಅಂತಲ್ಲಾ
ಬಲವಂತವೇ ಇಲ್ಲಾ
ನಿನ್ನ ಸಮಯ ನಿನಗಿರಲಿ
ಯೋಚಿಸು
ಕೇವಲ ನಾ ಬಯಸಿದ್ದು ನಿನ್ನ ಒಲವು.

ಮನೋಜ ಚಂದಾಪುರ
ಜೆ.ಎಸ್‌.ಎಸ್‌ ಶ್ರೀ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌

Prev Post

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

Next Post

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

post-bars

Leave a Comment

Related post