ಆ ದಿನಗಳು.. | ಕೆ. ರಹಿಮಾನಸಾಬ ನದಾಪ್
ಆ ದಿನಗಳು..!
ಕಳೆದ ಆ ಸುಂದರ ದಿನಗಳು
ಉಳಿದ ಪ್ರತಿಕ್ಷಣ ಬಾಲ್ಯದ ನೆನಪು
ಸಳೆದ ತಾಯಿಯನ್ನು ತುಂಬಾ ಕಾಡಿದ
ನಳನಳಿಸುವ ಬದುಕು ಕೊಟ್ಟಿರುವುದು..
ಅದಕೆ..
ಆ.. ದಿನಗಳ ಮರೆಯಲಾಗದು..!!
ಬಣ್ಣದ ಕನಸಿನ ಬಾಲ್ಯದ ಸ್ನೇಹಿತರೊಂದಿಗೆ
ಹಣ್ಣು ಹಂಪಲುಗಳನ್ನು ಕದ್ದು ಕದ್ದು ತಿನ್ನುವ
ದಿನಕ್ಕೊಬ್ಬರ ಮನೆ ಮನೆಗೆ ಹೋಗುತಲಿ
ಸಣ್ಣ ಸಣ್ಣ ವಿಷಯಕ್ಕೆ ಜಗಳಗಳ ಮಾಡಿದ
ಅದಕೆ..
ಆ.. ದಿನಗಳ ಮರೆಯಲಾಗದು..!!
ಮರೆತರು ನಿತ್ಯವೂ ಮತ್ತೆ ಮತ್ತೆ ಕಾಡುವುದು
ಹರಿದ ಅಂಗಿಯಲ್ಲಿ ಭವಿಷ್ಯ ಕಾಣುವುದು
ಜರಿದ ಜನರನ್ನು ಹೇಗೆ ತಾನೆ ಮರೆಯುವುದು
ಪೊರೆದ ಪರಿಸರವು ಕೈಬೀಸಿ ಕರೆಯುವುದು
ಅದಕೆ..
ಆ.. ದಿನಗಳ ಮರೆಯಲಾಗದು..!!
ಕುಚುಕುಗಳೊಡನೆ ಕುಚುಕುಚು ಕಿತ್ತಾಟ
ಅಚ್ಚಳಿಯದೇ ಉಳಿದಿವೆ ಮಾಸ್ತರ ಕಲಿಸಿದ ಪಾಠ
ಅಚ್ಚ ಹಸಿರಿನ ಆ ಕ್ಷಣಗಳು ನಿತ್ಯವೂ ರಸದೂಟ
ಹೆಚ್ಚೇನು ಹೇಳಲಿ ಬಾಲ್ಯ ಬಂಗಾರದ ಕಿರೀಟ
ಅದಕೆ..
ಆ.. ದಿನಗಳ ಮರೆಯಲಾಗದು..!!
———————————————————————
ಕೆ . ರಹಿಮಾನಸಾಬ.ನದಾಪ್
2 thoughts on “ಆ ದಿನಗಳು.. | ಕೆ. ರಹಿಮಾನಸಾಬ ನದಾಪ್”
ಧನ್ಯವಾದಗಳು ಕವನ ಉತ್ತಮವಾಗಿದೆ ,ತಮ್ಮ ಕಾವ್ಯ ಕೃಷಿ ಹೀಗೆ ಮುಂದುವರೆಯಲಿ
ಉತ್ತಮವಾದ ಬರವಣಿಗೆ ❤️❤️❤️👌👌