ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್
ಅಮ್ಮ ಜನ್ಮ ನೀಡಿದ ಕ್ಷಣವೇ
ಹೊಸ ಜಗತ್ತು ಕಾಣಿಸಿತು..
ವಾತಾವರಣ ಬೆಳಸಿದ ಕೂಡಲೇ
ಹೊಸ ಬೆಳಕು ಕಾಣಿಸಿತು..
ಆಟ,ಪಾಠ,ಸ್ನೇಹಿತರು ಕಾಣಿಸಿದ ಮರು ಕ್ಷಣವೇ
ಹೊಸ ಜೀವನ ಆರಂಭವಾಯಿತು..
ಅಲ್ಲಿಂದ ಇಲ್ಲಿಯವರೆಗೂ ನಾನೇನು ಮಾಡಿದೆ ಎಂದು ಒಮ್ಮೆ ಕೇಳಿಕೊ..
ಬರೀ ಬದಲಾಗಿದ್ದು ನಾವಾ ಅಥವಾ ವಾತಾವರಣ ನಾ….
ಹೊಸ ದಿನಾಂಕವನ್ನಾ ಒಮ್ಮೆ ಕೇಳಿಕೊ
ನೀನು ಬದಲಾಗಿದ್ದೀಯ ನಿನ್ನೊಟ್ಟಿಗೆ ನಾನು ಬದಲಾಗುವ,
ನನ್ನ ಆಲೋಚನೆಗಳು ಬದಲಾಯಿಸಿಕೊಳ್ಳುವ,
ಯೋಚನೆಗಳನ್ನ ರೂಪಿಸುವ ,ಹೊಸ ಪ್ರಯತ್ನ ಮಾಡುವ,
ಇಲ್ಲಿಯ ವರೆಗೂ ಹೇಗೋ ಇದ್ದೆ
ಈಗಾದರೂ ನನ್ನ ಜೀವನವನ್ನ ಸಲ್ಪ ನನ್ನ ಆಲೋಚನೆಗಳಿಗೆ ಬದಲಾವಣೆ ಮಾಡಿ
ಹೊಸ ಕಾರ್ಯತಂತ್ರಕ್ಕೆ ಮುನ್ನುಡಿಯಾಗುವ ,
ಪ್ರಯತ್ನ ಮಾಡುವೆ” ಅಂಥ ಈಗ, ಆಗ, ನಾವೆಲ್ಲರೂ ಬದಲಾಗೋಣ…
– ಅಂಕಲೇಶ ಹೆಚ್
ಸರಕಾರಿ ಪದವಿ ಪೂರ್ವ ಕಾಲೇಜು, ಹೊಸಪೇಟೆ