Back To Top

 ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಸುರತ್ಕಲ್‍ (ದಕ್ಷಿಣ ಕನ್ನಡ): ಇಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಜನವರಿ 14 ಮತ್ತು 15ರಂದು ನಡೆಯಲಿದೆ. ಜ. 14 ರಂದು ಚಂದ್ರಶೇಖರ ಕಂಬಾರ ಅವರ ರಚನೆಯ, ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ “ಹುಲಿಯ ನೆರಳು” ಮತ್ತು ಜ. 15 ರಂದು ಲೂಯಿ ನ ಕೋಶಿ ರಚನೆಯ, ನಟರಾಜ ಹೊನ್ನವಳ್ಳಿಯವರು ಕನ್ನಡಕ್ಕೆ ಭಾಷಾಂತರಿಸಿದ, ಶ್ವೇತಾರಾಣಿ ಎಚ್. ಕೆ. ನಿರ್ದೇಶನದ “ಆ ಲಯ ಈ ಲಯ” ನಾಟಕಗಳು ಪ್ರದರ್ಶನಗೊಳ್ಳಲಿದೆ.

ಸುರತ್ಕಲ್‍ನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ವಿದ್ಯಾದಾಯಿನೀ ಹಳೆವಿದ್ಯಾರ್ಥಿ ಸಂಘ, ಆಂತರಿಕ ಗುಣಮಟ್ಟ ಖಾತರಿ ಕೋಶ, ಗೋವಿಂದ ದಾಸ ಕಾಲೇಜು, ಬಿ.ಎ.ಎಸ್.ಎಫ್, ಬಾಳ, ಸುರತ್ಕಲ್ 1982ರ ವಿಜ್ಞಾನ ತಂಡದ ದತ್ತಿನಿಧಿ, ಗೋವಿಂದ ದಾಸ ಕಾಲೇಜು, ಸುರತ್ಕಲ್, ರಕ್ಷಕ ಶಿಕ್ಷಕ ಸಂಘ ಗೋವಿಂದ ದಾಸ ಕಾಲೇಜು, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ಗಳ ಸಹಭಾಗಿತ್ವದಲ್ಲಿ ನಾಟಕೋತ್ಸವ ನಡೆಯಲಿದೆ.

Prev Post

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

Next Post

ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

post-bars

Leave a Comment

Related post