Back To Top

 ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ
ಸುಂದರ ಕಾವ್ಯಾತ್ಮಕ ಅನುಬಂಧ
ಆನಂದ ಮನದಿ ತುಂಬಿ
ಪ್ರೀತಿಯ ರಸದೌತಣ ಬಡಿಸಿ
ಆವರಿಸಿದೆ ಜಗವ ಮರೆಸಿ

ಆ ಪ್ರೇಮ
ಜಗದಿ ಸಕಲ ಅಂದದಿ
ಮನಿಸಿ ಅದಮ್ಯ ಅನಂತದಿ
ಪರವಶವೀ ಮನ ಹಸಿರಿಗೆ
ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ

ಚೆಂಬೆಳಕಿನಲಿ ಚಿಲಿಪಿಲಿ ಇಂಚರ
ಗಾನಲಹರಿಗೆ ಸೋತಿದೆ ಚರಾಚರ
ಮೊಳೆಯೊಡೆವ ಮೊಗ್ಗು
ಬೆಳಗಿಗೆ ನೀಡಿದೆ ಸೊಬಗು
ಪಂಜರವಿಲ್ಲ ಈ ಚೆಲುವಿಗೆ
ಬಂಧವಿಲ್ಲ ಈ ಚೈತನ್ಯಕೆ

ಪ್ರೇಮದಿ
ಚಲಿಸುವ ಮೋಡವೆ
ಹಕ್ಕಿಗಳ ಪಯಣ ಮೂಡಿಸಿ
ಅನಂತವ ತೋರಿದೆ

ಪ್ರೇಮ
ಕಂಪನದಿ ಹರಿವ ನದಿಯ ದನಿಯಲಿ ಪಿಸುಗುಟ್ಟಿದೆ
ದುಂಬಿಗಳು ಪ್ರೇಮಿಸಿವೆ ಗಿಡಬಳ್ಳಿಯು ಸಂಸರ್ಗದಿ
ಆಲಂಗಿಸಿವೆ ಕಲ್ಲುಬಂಡೆಗಳು
ಅಲೆಗಳ ಸ್ನೇಹದಿ

ಅಬ್ದಿಯು ಶಾಂತವೀ ಪ್ರೇಮವಾದ್ಯದಿ
ಹಸಿರೋನ್ಮಾದದಿ
ಜಗವು ಸ್ವರ್ಗದಾಲಯ

ಬದುಕು ಧನ್ಯ ಈ ಪ್ರೇಮನೋಟದಿ
ಪ್ರೇಮ ಜೀವಿಸಿದೆ
ಅಂತರಾಳದಿ ಚೈತನ್ಯದಿ

ಸೌಮ್ಯ ನೇತ್ರೇಕರ್‌
ಕಲಾ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಂಡೇಲಿ

Prev Post

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

Next Post

ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

post-bars

Leave a Comment

Related post