ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್
ಇಲ್ಲಿ ಕಾಣುತ್ತಿರುವುದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ವಿಹಂಗಮ ನೋಟ. ಇದನ್ನು ಮಾರಿ ಕಣಿವೆ ಎಂತಲೂ ಕರೆಯುವುದುಂಟು. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ‘ಮೈಸೂರು ಸಂಸ್ಥಾನ’ದ ಅರಸರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ತಾಯಿಯಾದ ‘ಕೆಂಪ ನಂಜಮ್ಮಣಿ ವಾಣಿ ವಿಲಾಸ’ ಸನ್ನಿಧಾನದಿಂದ ಆರಂಭಿಸಲಾಗಿದೆ. ಹೀಗಾಗಿ ಇವರ ಹೆಸರಿನಲ್ಲಿ ನಿರ್ಮಾಣಗೊಂಡಿದೆ. 1898 ರಿಂದ 1907 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಮಾರಿ ಕಣಿವೆ ನೀರಾವರಿ ಯೋಜನೆಯನ್ನು ಸರ್. ಮಾರ್ಕ್ ಕಬ್ಬನ್ ಆರಂಭಿಸಿದರು.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿ ಪವನ್ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ದೃಶ್ಯ ಇದು.