Back To Top

 ಪ್ರೀತಿ, ಪ್ರೇಮ ಎಂಬ ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ : ಸಿಪಿಐ ಗಾಯತ್ರಿ

ಪ್ರೀತಿ, ಪ್ರೇಮ ಎಂಬ ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ : ಸಿಪಿಐ ಗಾಯತ್ರಿ

Ballari :  ಸಮಾಜದಲ್ಲಿ ಮಹಿಳೆ ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾಳೆ. ಸಮಾಜದ ಮದ್ಯ ಹೇಗೆ ಬದುಕಬೇಕು,  ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆಪ್ ಇನ್ಸ್ಟಾಗ್ರಾಂ ಮುಂತಾದ ಮಾಧ್ಯಮಗಳನ್ನು ಜಾಗರೂಕತೆಯಿಂದ ಹೇಗೆ ಬಳಸಬೇಕು ಎಂಬುದನ್ನು ಸಿಪಿಐ ಗಾಯತ್ರಿ ಅವರು ತಿಳಿಸಿದರು. ಅವರು ಎನ್ . ಎಂ. ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹದಿವಯಸ್ಸಿನ ಬಯಕೆಗಳಾದ  ಪ್ರೀತಿ ಪ್ರೇಮ ಪ್ರಣಯ ಎಂಬ ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ,  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಿರಿ ಎಂದು ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರಾದ ದರೂರು ಶಾಂತನಗೌಡರು ಮಾತನಾಡುತ್ತಾ ಮಹಿಳೆಯರು ಸಮಾಜದ ಎಲ್ಲ ರಂಗಗಳಲ್ಲಿ ಮುಂದುವರೆಯಬೇಕು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೀ.ವಿ ಸಂಘವು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆರಂಭಿಸುವ ಆಶಯ ಹೊಂದಿದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀ ವಿ ಸಂಘದ ಉಪಾಧ್ಯಕ್ಷರು ಹಾಗೂ ಆರ್ ವೈ ಎಂ ಇ ಕಾಲೇಜಿನ  ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನೇಕುಂಟೆ ಬಸವರಾಜ ಅವರು ಮಾತನಾಡುತ್ತಾ  ಬದುಕಿನಲ್ಲಿ ತಮ್ಮ ತಾಯಿಯ ಪಾತ್ರ ಎಷ್ಟೊಂದು ಮಹತ್ವವಾಗಿತ್ತು ಎಂಬುದನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಕೆ.ಮುದ್ದನಗೌಡ ವೀ ವಿ ಸಂಘದ ಅಜೀವ ಸದಸ್ಯರು ಅಖಿಲ ಭಾರತ ವೀರಶೈವ ಮಹಾಸಭಾದ ಸದಸ್ಯರಾದ ಕೆ.ಪಿ ಚೆನ್ನ ಬಸವನಗೌಡರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಎಂ ದೇವೇಂದ್ರಯ್ಯ ಇವರು ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಂಗ್ಲ ಉಪನ್ಯಾಸಕರಾದ ವೀರೇಂದ್ರಗೌಡರು ಅಥಿತಿಗಳ ಪರಿಚಯ ಮಾಡಿಕೊಟ್ಡರು , ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿನಿಯರು ಸೇರಿ ಕೇಕ್ ಕತ್ತರಿಸಿ ಮಹಿಳಾ ದಿನಸಚರಣೆಯನ್ನು ಸಂಭ್ರಮಿಸಿದರು.

ವಿದ್ಯಾರ್ಥಿನಿಯರಾದ ಕು.ಲಾವಣ್ಯ .ಹಾಗೂ ಕು.ಅನುಷಾ  ಪ್ರಾರ್ಥಿಸಿದರೆ ಕನ್ನಡ ಉಪನ್ಯಾಸಕರಾದ ಎ.ಎಂ.ಪಿ ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಸ್ವೀಗೊಳಿಸಿದರು.

 

 

Prev Post

ಚಿತ್ರ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

Next Post

ಮಹಿಳೆಯರು ಮತ್ತು ಕಾನೂನು

post-bars

Leave a Comment

Related post