ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ
ಹೃದಯದ ಅರಮನೆಯಲ್ಲಿ
ಬಲಗಾಲಿಟ್ಟು ಬಾ ಗೆಳಯ
ಕಾದಿರುವೆ ನಿನಗಾಗಿ…
ಬೆಳದಿಂಗಳ ಛಾಯೆ ಮೂಡಿಸು ಇಲ್ಲಿ
ನೀನಿರದೆ ಏನಿಲ್ಲಾ
ಈ ಬಾಳಲ್ಲಿ…
ನೀ ಇರದ ಹೊರತು
ಕಗ್ಗತ್ತಲು ಮನದಲ್ಲಿ
ಸವಿ ನೆನಪು ಮೂಡಿಸು ಇಲ್ಲಿ…
ಹೃದಯ ನಾನಾಗಿ
ಹೃದಯ ಬಡಿತ ನೀನಾಗಿ
ಕೂಡಿ ನಲಿಯೋಣ ಮನದಲ್ಲಿ…
ಆವರಿಸು ಗಾಳಿಯಾಗಿ
ಬಾಳಿಸು ಕೊಲ್ಮಿಂಚಾಗಿ
ಆದರಿಸು ಪ್ರೇಮಾಂಕುರವಾಗಿ…
ರಿಯಾನಾಬಾನು ಜೆ ದೊಡ್ಡಮನಿ
ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು, ರಾಣೆಬೆನ್ನೂರು