ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)
“ನಾ ಗೀಚುವೆ, ಬರೆಯುವೆ,
ಪ್ರತಿ ಪುಟವೂ ನಿನ್ನನೇ..
ನೀ ನುಡಿಯುವೆ, ಸೆಳೆಯುವೆ,
ಆಲಾಪದಿಂದಲೇ..
ಕತ್ತಲೆಯು ಬೆಳಕಾಯಿತು, ನೀ ಬಂದೆಯಾ?
ಚಂದಿರನ ಸೋಬಾನವು, ನೀನಾದೆಯಾ?
ಸಾಧ್ಯವಿದು, ನನ್ನಯ ವಾಸ್ತವವು,
ನಿನ್ನದೇ ಕನಸಲಿ ಕಳೆದಿಹುದು,
ನಿನ್ನಿಂದಲೇ..
|| ನಾ ಗೀಚುವೆ ||
ಮತ್ತದೇ ಆಲಾಪನೆ, ನೀ ತಂದೆಯಾ?
ಬರವಣಿಗೆ ಬಡವಾಯಿತು, ನೀ ಕಾರಣ..
ಮೈ-ಮನಸು ಬಡಿಯಲು ಬೇಡಿದವು,
ಕಣ್ಣುಗಳು ಮಿಟುಕಲು ಕೇಳಿದವು,
ನಿನ್ನೊಲುಮೆಯ..
|| ನಾ ಗೀಚುವೆ ||
-ಈಧ್ಯ ದೇವ (ದರ್ಶನ್ ಎ.ಎನ್)
ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್