February 25, 2024
ಹಚ್ಚ ಹಸಿರ ತನುವು ನಮ್ಮ ಪ್ರೇಮ | ಮುಖೇಶ್ ಪಿ
ಬರಿಸಿಡಿಲ ಬೆನ್ನೇರಿಸಿ ವಿರಹವೇದನೆಯೊಳಮಿದ್ದು ಗರ್ಭಿಣಿಯೊಳ ಜನಿಸಿತಮ್ಮಯ ಅಂದು ಪ್ರೇಮ ವಿಯೋಗವನೊಂದು ಮಧುಪಾನಿಯ ಚಪಲವಿಡಿದು ವಧುಮೈತ್ರಿಯ ನೆರೆಜಿನಿತು ಮಧ್ಯಂತರ ನೀಲದಡಿ ನೆಲೆಗೊಂಡೆ ಭುವಿಗಿಳಿದ ಚಿಂಬನಿಯು ವಿರಹಗಂಬನ್ನಿಯ ಜಿನಿಕಂಡು ಮಿಲನದಿಂದೊಳಗೊಂಡು ಧರೆಗರಿಸಿತು ತವಕಸಂಕಿರಣದಿಂದೊಳಗವಳಕಂಡೆ ಪದರದಿಂದೊಳುಕುಸುಮ ಕಂಡಂತೆ ಅಕ್ಷಿಪಟಲದೊಳು ಕಂಡಳಮ್ಮ ಕಪ್ಪು ಕಾಡಿಗೆಯ ನೊದ್ದು… ಬರಿನೆಲದ ತಂಪಾಗಿ ಒಣಮರದ ಚಿಗುರಾಗಿ ತಿಮಿರಸಿರ ಹಚ್ಚಾಗಿ ಹಚ್ಚಸಿರ ತನುವಾದಿತಮ್ಮ ನಮ್ಮ ಪ್ರೇಮ…. ಮುಖೇಶ್
By Book Brahma
- 311
- 0
- 0