February 11, 2024
ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ
ಅನ್ನಿಸುವುದು ಕೆಲವೊಮ್ಮೆ ಕಲ್ಲಗೋಡೆಯಾಗಬೇಕಿತ್ತು ಪಶುಪಕ್ಷಿಯಾಗಬೇಕಿತ್ತು ಗಿಡಮರಗಳಾಗಬೇಕಿತ್ತು ಸಾಕಾಗಿದೆ ಮಾನವ ಜನ್ಮ, ನೆಮ್ಮದಿಯಿಲ್ಲ ನಾಡಿನಲಿ ಒಡನಾಡಿಗಳಲಿ ದ್ವೇಷ, ಅಸೂಯೆ ಹೆಚ್ಚಾಗಿದೆ ಮಾನವನಲಿ ಪ್ರೀತಿಯು ಗೈರಾಗಿಬಿಟ್ಟಿದೆ ಮಮತೆ-ವಾತ್ಸಲ್ಯ ಮರೆತುಹೋಗಿದೆ ಸ್ನೇಹವು ಅಡಗಿಕೊಂಡು ಬಿಟ್ಟಿದೆ ಸ್ವಾರ್ಥವು ಪರಮಾರ್ಥವಾಗಿಬಿಟ್ಟಿದೆ ಬೀಳುವುದು ಅದೊಮ್ಮೆ ಬರಗಾಲ ಸ್ನೇಹ-ಪ್ರೀತಿಯದು ಮಮತೆ-ವಾತ್ಸಲ್ಯದ್ದು ಆಗ ನರನೆದೆಯಲಿ ಮಾನವವೀಯತೆ ಮೊಳಕೆಯೊಡೆದು ಹಸಿರಾಗುವುದು ನಾಗರಾಜ ಕುಟುಮರಿ ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
By Book Brahma
- 356
- 0
- 0