Back To Top

Poem : ಮುಟ್ಟು | ಸಿದ್ದಾರ್ಥ ಹುದ್ದಾರ

Poem : ಮುಟ್ಟು | ಸಿದ್ದಾರ್ಥ ಹುದ್ದಾರ

ಮುಟ್ಟು ಬಂದಿತು ನನಗಿಂದು ಮುಟ್ಟು ನನ್ನ ದೇಹದ ಒಳಗಾಗಿತ್ತು ಈ ಮುಟ್ಟು   ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ ಶುಭ ಕಾರ್ಯದಲ್ಲಿ ಬಾಗಿಯಾಗದಂತೆ ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ   ಮುಟ್ಟು ಹುಟ್ಟುವಿಗೆ ಕಾರಣವಾಗಿ ಹುಟ್ಟಿದವನು ಪವಿತ್ರನಾದರೆ ಮುಟ್ಟಾದವಳು ಹೇಗೆ ಮುಡಿಚಟ್ಟಾದಳು   ಮನದ ಕೆಟ್ಟ ಹೊಟ್ಟು ಸಂಪ್ರದಾಯದ ಹುಟ್ಟು ಅವಳನ್ನು ಮಾಡಿಸಿತು ಮುಟ್ಟದಂತೆ
  • 826
  • 0
  • 0